ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇಬ್ಬರು ನಟಿಯರು ಅರೆಸ್ಟ್ ಆದ ಬಳಿಕ ಕೇಸ್ನಲ್ಲಿ ರಾಜಕೀಯ ನಂಟಿನ ಕುರಿತ ಚರ್ಚೆ ಜೋರಾಗಿದೆ. ಶಾಸಕ ಜಮೀರ್ ಅಹ್ಮದ್ ಅವರ ಹೆಸರನ್ನು ಪ್ರಕರಣದಲ್ಲಿ ಬಿಜೆಪಿ ಎಳೆದು ತಂದಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಜಮೀರ್ ಬಂಧನವಾಗುತ್ತದೆ ಎಂದು ಬಿಜೆಪಿ ವಕ್ತಾರ ರವಿ ಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರವಿ ಕುಮಾರ್ ಅವರು, ಇನ್ನು ಕೆಲ ದಿನಗಳಲ್ಲಿ ಶಾಸಕ ಜಮೀರ್ ಅವರನ್ನು ಪ್ರಕರಣದಲ್ಲಿ ಬಂಧನ ಮಾಡುವ ಸಮಯ ಬರುತ್ತದೆ. ಜವಾಬ್ದಾರಿಯುತ ಸರ್ಕಾರ ಆಗಿರುವುದರಿಂದ ಅರೆಸ್ಟ್ ಮಾಡಲು ಬೇಕಾದ ಸೂಕ್ತ ಆಧಾರಗಳನ್ನು ಇಟ್ಟುಕೊಂಡು ಬಂಧನ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್ಗೆ ಬಿಜೆಪಿ ಟಾಂಗ್
Advertisement
Advertisement
ಪ್ರಶಾಂತ್ ಸಂಬರಗಿ ಅವರು ನೀಡಿದ ಹೇಳಿಕೆಯಂತೆ ಸಚಿವ ಸಿಟಿ ರವಿ ಅವರು ಕೂಡ ಹವಾಲಾ ಹಣದ ಕುರಿತು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಜಮೀರ್ ಅವರ ಹೆಸರನ್ನು ಇಂದು ಎಳೆದು ತಂದಿದ್ದರು. ಡ್ರಗ್ಸ್ ವಿರುದ್ಧ ಈ ಬಾರಿ ಮಾತ್ರವಲ್ಲ, ಹಿಂದಿನ ಸರ್ಕಾರ ಇದ್ದಾಗಲೂ ಕೂಗು ಕೇಳಿ ಬರುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಮಾತ್ರ ಈ ಬಗ್ಗೆ ಕಠಿಣವಾದ ನಿರ್ಧಾರ ತೆಗೆದುಕೊಂಡು ಮಾಫಿಯಾ ಮಟ್ಟಹಾಕಲು ಮುಂದಾಗಿದೆ ಎಂದು ಕಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ
Advertisement
Advertisement
ಇತ್ತ ಜಮೀರ್ ಅವರ ಪಾತ್ರದ ಕುರಿತು ಟ್ವೀಟ್ ಮಾಡಿರುವ ಸಚಿವ ಸಿಟಿ ರವಿ ಅವರು, ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಜಮೀರ್ ಉಪಸ್ಥಿತರಿದ್ದರು, ಇದರಲ್ಲಿ ಬಂಧನಕ್ಕೊಳಗಾಗಿರುವ ನಟಿ ಇದ್ದರು ಎಂಬುದು ನಿಜವಲ್ಲವೇ? ಬಂಧಿತ ಇನ್ನೊಬ್ಬ ನಟಿ ಸಹಾಯಕ್ಕಾಗಿ ಯಾಕೆ ಮನವಿ ಮಾಡಿದರು? ಅವನ ಮತ್ತು ಡ್ರಗ್ ಮಾಫಿಯಾ ನಡುವಿನ ಸಂಬಂಧ ಏನು ಎಂದು ಪ್ರಶ್ನಿಸಿದ್ದಾರೆ. ನಟಿ ಸಂಜನಾ ಬಂಧನ ಮುನ್ನ ಜಮೀರ್ ಅವರ ಸಹಾಯ ಕೋರಿದನ್ನೇ ಆಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಪ್ರಕರಣದಲ್ಲಿ ಜಮೀರ್ ಅವರಿಗೆ ನೋಟಿಸ್ ನೋಡಿ ವಿಚಾರಣೆಗೆ ಕರೆತರಲು ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಗೆ ಪಕ್ಷದ ರಾಜ್ಯ ಘಟಕವೂ ಬೆಂಬಲ ನೀಡಿ ಸರಣಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?