ಬೆಂಗಳೂರು: ಸೈಕಲ್ ಪ್ರಿಯರಿಗೆ ಗುಡ್‌ನ್ಯೂಸ್. ಇನ್ನು ಮುಂದೆ ಆಫೀಸಿಗೆ ಸೈಕಲ್‌ನಲ್ಲಿ ತೆಗೆದುಕೊಂಡಬಹುದು.
ಸೈಕಲ್ ಬಳಕೆದಾರರನ್ನು ಉತ್ತೇಜಿಸಲು ಬಿಎಂಟಿಸಿ ಹೊಸ ಪ್ಲಾನ್ ಮಾಡಿದ್ದು, ಬಸ್ ನಲ್ಲಿ ಸಂಚಾರ ಮಾಡುವಾಗ ಸೈಕಲ್ ನ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ಬಸ್ ಇಳಿದ ಬಳಿಕ ಸೈಕಲ್ ನಲ್ಲಿ ಮನೆ, ಕಚೇರಿಯನ್ನು ತಲುಪಬಹುದು.
ಸದ್ಯ ಒಂದು ಬಸ್‌ಗೆ ಸೈಕಲ್ ರ‍್ಯಾಕ್ ಫಿಟ್ ಮಾಡಲಾಗಿದ್ದು, ಇದರಲ್ಲಿ ಎರಡು ಸೈಕಲ್ ಇಡಬಹುದು. ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರಂ ರಸ್ತೆಯಲ್ಲಿ ಸಂಚರಿಸುವ ಸೈಕಲ್ ಪ್ರೇಮಿಗಳು ಬಸ್‌ನಲ್ಲಿ ಸೈಕಲ್ ತೆಗೆದುಕೊಂಡು ಹೋಗಬಹುದು.
ಪ್ರಯೋಗಿಕ ಹಂತವಾಗಿ ಸೋಮವಾರದಿಂದ ಸೈಕಲ್ ತೆಗೆದುಕೊಂಡು ಹೋಗುವ ಬಸ್‌ಗಳು ರಸ್ತೆಗೆ ಇಳಿಯಲಿದೆ. ಒಟ್ಟು 100 ಬಸ್‌ಗಳಿಗೆ ಸೈಕಲ್ ರ‍್ಯಾಕ್ ಜೋಡಿಸಲಾಗುತ್ತದೆ.