– ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಲಕ್ನೋ: ಯುವತಿ ನೀರಿನ ಟ್ಯಾಂಕ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಉತ್ತರ ಪ್ರದೇಶದ ಮುಜಫರನಗರದ ಮಂಡಿ ಕೋತ್ವಾಲಿ ಕ್ಷೇತ್ರದ ಗಾಂಧಿನಗರದಲ್ಲಿ ನಡೆದಿದೆ.
ಇನಿಯನೊಂದಿಗೆ ಜಗಳ ಮಾಡಿಕೊಂಡಿದ್ದ ಯುವತಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಏರಿದ್ದಳು. ಕೆಳಗೆ ಕುಟುಂಬಸ್ಥರು ಮತ್ತು ಸ್ಥಳೀಯರು ಕೆಳಗೆ ಇಳಿಯುವಂತೆ ಮನವಿ ಮಾಡಿಕೊಂಡಿದ್ದರು. ಆದ್ರೂ ಯುವತಿ ತಾನು ಸಾಯೋದಾಗಿ ಜೋರು ಜೋರಾಗಿ ಕೂಗಿ ಹೇಳಿದ್ದಾಳೆ. ಹಿಂದಿನಿಂದ ಓರ್ವ ಮೆಟ್ಟಿಲು ಏರಿ ಯುವತಿಯನ್ನ ರಕ್ಷಿಸಲು ಮುಂದಾಗಿದ್ದಾನೆ.
Advertisement
Advertisement
ವ್ಯಕ್ತಿ ತನ್ನ ಬಳಿ ಬರೋದನ್ನ ನೋಡಿದ ಯುವತಿ ವಾಟರ್ ಟ್ಯಾಂಕ್ ಮೇಲ್ಭಾಗದಿಂದ ಕೆಳಗೆ ಜಿಗಿದಿದ್ದಾಳೆ. ಕೂಡಲೇ ಪೋಷಕರು ಯುವತಿಯನ್ನ ಆಸ್ಪತೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಪತ್ನಿಯನ್ನ ಕೊಂದು ಎಣ್ಣೆ ಬಾಟಲ್ ಹಿಡಿದು ನೀರಿನ ಟ್ಯಾಂಕ್ ಏರಿದ