ಮಹಿಳೆಯನ್ನು ಭೋಗದ ವಸ್ತುವೆಂಬಂತೆ ಕಾಣುತ್ತಾ ಹಿಂಸಿಸೋ ಕಾಲವೀಗ ಮರೆಯಾಗಿದೆ. ಸಂದರ್ಭ ಬಂದರೆ ಹೆಣ್ಣು ಗಂಡಿಗಿಂತಲೂ ಬಲಶಾಲಿಯಾಗಬಲ್ಲಳೆಂಬ ಸತ್ಯ ಸರ್ವವ್ಯಾಪಿಯಾಗಿ ಬಿಟ್ಟಿದೆ. ಅಷ್ಟಕ್ಕೂ ಮಹಿಳೆಯರು ಪುರುಷರಿಗೆ ಎಲ್ಲ ಥರದಲ್ಲಿಯೂ ಸರಿಸಮನಾಗಿ ನಿಂತಿದ್ದಾರೆ. ಮಹಿಳೆಯರು ಮನಸು ಮಾಡಿದರೆ ಎಂಥಾ ಸಾಹಸವನ್ನಾದ್ರೂ ಮಾಡ್ತಾರೆ, ತಮಗೆ ತಾವೇ ರಕ್ಷಣೆಯಾಗಿ ನಿಲ್ತಾರೆಂಬುದಕ್ಕೆ ಕೀನ್ಯಾದ ಉಮೋಜಾ ಎಂಬ ಹಳ್ಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ.
Advertisement
ಅದೇನೇ ಹಾರಾಡಿದರೂ ಹೆಣ್ಣಿಗೆ ಗಂಡಿನಾಸರೆ ಬೇಕೇ ಬೇಕೆಂಬ ಪುರುಷತ್ವದ ಅಹಂ ಇದೆಯಲ್ಲಾ? ಅದಕ್ಕೆ ಛಾಟಿ ಬೀಸಿದಂತೆ ಉಮೋಜಾದಲ್ಲಿ ಮಹಿಳೆಯರೇ ಸ್ವಂತ ಸ್ವರ್ಗ ಕಟ್ಟಿಕೊಂಡಿದ್ದಾರೆ. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಆ ಹಳ್ಳಿಗೆ ಮೂವತ್ತು ವರ್ಷಗಳಿಂದೀಚೆಗೆ ಯಾವೊಬ್ಬ ಪುರುಷನ ನೆರಳೂ ಬಿದ್ದಿಲ್ಲ. ಅಲ್ಲಿರೋ ಹದಿನೈದು ಮಂದಿ ಮಹಿಳೆಯರು ಆ ಹಳ್ಳಿಯ ವಾತಾವರಣದಲ್ಲಿ ತಮ್ಮ ಅನ್ನ ತಾವೇ ಸೃಷ್ಟಿಸಿಕೊಂಡು ನೆಮ್ಮದಿಯಾಗಿ ಬದುಕ್ತಿದ್ದಾರೆ. ಸದಾ ತಮ್ಮನ್ನು ತಾವೇ ಪುರುಷಾಧಿಪತ್ಯದ ದಾಳಿಗಳಿಂದ ರಕ್ಷಿಸಿಕೊಳ್ತಿದ್ದಾರೆ.
Advertisement
Advertisement
ಹಾಗಂತ ಈ ಹಳ್ಳಿಯೇನು ಸುಮ್ಮನೆ ಹುಟ್ಟಿಕೊಂಡಿಲ್ಲ. ಅದರ ಹಿಂದೆ ತೊಂಭತ್ತರ ದಶಕದ ಆಚೀಚೆ ನಡೆದಿದ್ದ ಘಟನೆಯೊಂದರ ಕಿಸುರಿದೆ. 1990ರ ಸುಮಾರಿಗೆ ಈ ಭಾಗದ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ಬ್ರಿಟಿಷ್ ಸೈನಿಕರು ಅತ್ಯಾಚಾರ ನಡೆಸಿದ್ದರಂತೆ. ನಿರಂತರವಾಗಿ ಇಲ್ಲಿನ ಅದೆಷ್ಟೋ ಮಹಿಳೆಯರು ಇಂಥ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದರು. ಅದರಿಂದ ಆ ಭಾಗದ ಯಾವ ಗಂಡಸೂ ಕೂಡಾ ಹೆಂಗಳೆಯರನ್ನು ಪಾರು ಮಾಡಲು ಸಾಧ್ಯವಾಗಿರಲಿಲ್ಲ.
Advertisement
ಈ ನರಕವನ್ನು ಸ್ವತಃ ಕಂಡು ಸೆಡ್ಡು ಹೊಡೆದವಳು ರೆಬೆಕ್ಕಾ ಲೋಲೊಸೋಲಿ ಎಂಬಾಕೆ. ರೆಬೆಕ್ಕಾಳ ಮೇಲೆ ಬ್ರಿಟಿಷ್ ಸೈನಿಕರು ಅದ್ಯಾವ ಪರಿ ರಕ್ಕಸ ಪ್ರವೃತ್ತಿ ತೋರಿದ್ದರಂದ್ರೆ ಪುರುಷರನ್ನು ಕಂಡರೆ ಆಕೆಗೆ ವಾಕರಿಕೆ ಹುಟ್ಟಲಾರಂಭಿಸಿತ್ತು. ಇದರಿಂದಾಗಿ ತನ್ನಂತೆಯೇ ದೌರ್ಜನ್ಯಕ್ಕೀಡಾದ ಹದಿನೈದು ಮಹಿಳೆಯರ ಗುಂಪು ಕಟ್ಟಿಕೊಂಡ ಆಕೆ ಉಮೋಜಾ ಎಂಬ ಹಳ್ಳಿಯನ್ನು ಸೃಷ್ಟಿಸಿದ್ದಳು. ಅದು ಸೃಷ್ಟಿಯಾಗಿದ್ದು ಈಗ್ಗೆ ಮೂವತ್ತು ವರ್ಷಗಳ ಹಿಂದೆ. ಈ ಕ್ಷಣಕ್ಕೂ ಆ ಹಳ್ಳಿಗೆ ಪುರುಷರ ಎಂಟ್ರಿ ಆಗಿಲ್ಲ. ಈ ಮೂಲಕ ರೆಬೆಕ್ಕಾ ತನ್ನ ಸಂಗಾತಿಗಳೊಂದಿಗೆ ಸೇರಿ ಪುರುಷರ ಹಂಗಿಲ್ಲದೆಯೂ ಬದುಕಬಹುದೆಂಬುದನ್ನು ಸಾಬೀತು ಪಡಿಸಿದ್ದಾಳೆ.