ನೆಲಮಂಗಲ: ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ಗೊಲ್ಲಹಳ್ಳಿ ಬಯಲು ಆಂಜನೇಯ ದೇವಾಲಯ ಮುಕ್ತವಾಗಿದೆ.
ಕೋವಿಡ್ 19ನಿಂದ ಇಡೀ ರಾಜ್ಯವೇ ಲಾಕ್ಡೌನ್ ಆಗಿ, ಇಂದಿನಿಂದ ಅನ್ಲಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೇವಾಲಯಗಳು ದರ್ಶನಕ್ಕೆ ಮುಕ್ತವಾಗಿದೆ. ನೆಲಮಂಗಲ ಗ್ರಾಮಾಂತರ ಭಾಗದ, ಮುಜರಾಯಿ ಇಲಾಖೆಯ ಎ ಗ್ರೇಡ್ ಶ್ರೇಣಿಯ ರೈಲ್ವೆ ಗೊಲ್ಲಹಳ್ಳಿ (ಬೈರಶೆಟ್ಟಿಹಳ್ಳಿ) ಇತಿಹಾಸ ಪ್ರಸಿದ್ದ ಶ್ರೀ ಬೈಲಾಂಜನೇಯ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.
Advertisement
Advertisement
ಮುಜರಾಯಿ ಇಲಾಖೆ ದೇವಾಲಯವಾದ್ದರಿಂದ ಸರ್ಕಾರದ ಯೋಜನೆಗಳಿಗೆ ಒಳಪಡುವ ಗೊಲ್ಲಹಳ್ಳಿ ಆಂಜನೇಯ ದೇವಾಲಯದ ಬೆಳಗ್ಗೆಯೇ ದೇವಾಲಯ ಆವರಣ ಸ್ವಚ್ಚತೆಯಾಗಿದೆ. ಕೋವಿಡ್ ಹಿನ್ನೆಲೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಇಲ್ಲ ಎಂದು ಪ್ರಧಾನ ಅರ್ಚಕರಾದ ವಸಂತ್ ಕುಮಾರ್ ಹಾಗೂ ಪಾರಪತ್ತೇದಾರ ಶ್ರೀನಿವಾಸ್ ತಿಳಿಸಿದ್ದಾರೆ.
Advertisement
ಕೋವಿಡ್ ನಿಯಮ ಎಚ್ಚರಿಕೆ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಆದರೆ ಮೊದಲ ದಿನವಾದ ಇಂದು ಭಕ್ತರ ಸಂಖ್ಯೆ ಕಡೆಮೆ ಇದ್ದು ಮುಂದಿನ ದಿನಗಳಲ್ಲಿ ಭಕ್ತರು ಬರುವ ವಿಶ್ವಾಸವನ್ನ ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆ – ಬಿಎಸ್ವೈ ವಿರುದ್ಧ ಗುಡುಗಿದ ಯತ್ನಾಳ್