– 100 ರೂಪಾಯಿಗೆ ಹಾಲು ಮಾರಾಟ
ಚಂಡೀಗಢ: ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಲೀಟರ್ ಹಾಲಿಗೆ 100 ರೂಪಾಯಿನಂತೆ ಮಾರಲು ಹರಿಯಾಣದ ಹಿಸಾರ್ನಲ್ಲಿ ರೈತ ಮಹಾಪಂಚಾಯತ್ನಲ್ಲಿ ಸೂಚನೆ ನೀಡಲಾಗಿದೆ.
Advertisement
ಕೇಂದ್ರದ ಕೃಷಿ ಕಾಯ್ದೆ ಮತ್ತು ಇಂಧನ ಬೆಲೆ ಎರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಿರುವಾಗ ರೈತ ಮುಖಂಡ ರಾಮ್ನಿವಾಸ್ ನೇತೃತ್ವದಲ್ಲಿ ಮಹಾ ಪಂಚಾಯತ್ ಸಭೆ ನಡೆದಿದ್ದು, ಇಂದನ ಬೆಲೆ ಏರಿಕೆ ಹಿನ್ನೆಲೆ ಹಾಲಿನ ದರವನ್ನು 100 ರೂಪಾಯಿಗೆ ಹೆಚ್ಚಿಸಿ ಮಾರಾಟ ಮಾಡುವಂತೆ ಸಭೆಯಲ್ಲಿ ನೆರೆದಿದ್ದ ರೈತರು ಹೇಳಿದ್ದಾರೆ.
Advertisement
Advertisement
ಮಾರ್ಚ್ 1ರಿಂದ 1ಲೀಟರ್ ಹಾಲಿಗೆ 100 ರೂಪಾಯಿಯಂತೆ ಹಾಲು ಮಾರಟ ಮಾಡಲು ರೈತರಿಗೆ ಹೇಳಲಾಗಿದೆ. ಸಾಮಾನ್ಯ ಜನರಿಗೆ 55 ರಿಂದ 60 ರೂಪಾಯಿಗೆ ಮಾರಾಟವಾಗಲಿದೆ. ಆದರೆ ಡೈರಿಗಳಿಗೆ 100 ರೂಪಾಯಿಗೆ ಹಾಲು ಹಾಕುತ್ತೇವೆ ಎಂದು ಖಾಪ್ ಪಂಚಾಯತ್ ಮುಖಂಡ ಫೂಲ್ ಕುಮಾರ್ ಪೆಟ್ಟಾರ್ ಹೇಳಿದ್ದಾರೆ.
Advertisement
ಬೆಲೆ ಏರಿಕೆ ಯಾಕೆ?
ಕೋವಿಡ್ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ವಿವಿಧ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.