ಬೆಂಗಳೂರು: ಮಹಾಮಾರಿ, ಡೆಡ್ಲಿ ವೈರಸ್ ಕೊರೊನಾ ಇಂದು 99 ಜನರಿಗೆ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೇರಿಕೆಯಾಗಿದೆ.
ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 84 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ 15 ಜನರಿಗೆ ಸೋಂಕು ತಗುಲಿದೆ. ಗ್ರೀನ್ಝೋನ್ ನಲ್ಲಿದ್ದ ರಾಯಚೂರು ಮತ್ತು ಕೊಪ್ಪಳದಲ್ಲಿಯೂ ಕೊರೊನಾ ಪ್ರಕರಣಗಳ ಬೆಳಕಿಗೆ ಬಂದಿವೆ. ಇಂದು ಒಟ್ಟು 21 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 530 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ಮಾಹಿತಿ- 84 ಸೋಂಕಿತರ ವಿವರ
Advertisement
ಇಂದು ನಾಲ್ವರಿಗೆ ಕೊರೊನಾ – ಹಾಸನದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ https://t.co/GvZ8pqsfdC#Hassan #CoronaVirus #Covid19 #KarnatakaFightsCorona
— PublicTV (@publictvnews) May 18, 2020
Advertisement
ಸೋಂಕಿತರ ವಿವರ:
85. ರೋಗಿ 1232: ಉತ್ತರ ಕನ್ನಡ ಜಿಲ್ಲೆಯ 37 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆ.
86. ರೋಗಿ 1233: ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಪುರುಷ. ಮಹಾರಾಷ್ಟ್ರದ ರಾಯಗಢ ಪ್ರಯಾಣದ ಹಿನ್ನೆಲೆ.
87. ರೋಗಿ 1234: ದಕ್ಷಿಣ ಕನ್ನಡದ 55 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ.
88. ರೋಗಿ 1235: ಉಡುಪಿಯ 28 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆ
89. ರೋಗಿ 1236: ಬೆಂಗಳೂರಿನ 43 ವರ್ಷದ ಪುರುಷ. ತಮಿಳುನಾಡಿದ ವೆಲ್ಲೂರ್ ಪ್ರಯಾಣದ ಹಿನ್ನೆಲೆ.
90. ರೋಗಿ 1237: ಬೆಂಗಳೂರಿನ 39 ವರ್ಷದ ಪುರುಷ. ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಸಂಪರ್ಕ.
91. ರೋಗಿ 1238: ಬೆಂಗಳೂರಿನ 32 ವರ್ಷದ ಪುರುಷ. ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಸಂಪರ್ಕ.
92. ರೋಗಿ 1239: ಬೆಂಗಳೂರಿನ 11 ವರ್ಷದ ಬಾಲಕ. ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಸಂಪರ್ಕ.
93. ರೋಗಿ 1240: ಬೆಂಗಳೂರಿನ 30 ವರ್ಷದ ಮಹಿಳೆ. ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಸಂಪರ್ಕ.
94. ರೋಗಿ 1241: ಬೆಂಗಳೂರಿನ 8 ವರ್ಷದ ಬಾಲಕಿ. ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಸಂಪರ್ಕ.
95. ರೋಗಿ 1242: ಕಲಬುರಗಿಯ 4 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆ.
96. ರೋಗಿ 1243: ಕಲಬುರಗಿಯ 6 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆ.
97. ರೋಗಿ 1244: ಕಲಬುರಗಿಯ 4 ವರ್ಷದ ಬಾಲಕ. ಮಹಾರಾಷ್ಟ್ರದ ಪುಣೆ ಪ್ರಯಾಣದ ಹಿನ್ನೆಲೆ.
98. ರೋಗಿ 1245: ಕಲಬುರಗಿಯ 5 ವರ್ಷದ ಬಾಲಕಿ. ಮಹಾರಾಷ್ಟ್ರದ ಪುಣೆ ಪ್ರಯಾಣದ ಹಿನ್ನೆಲೆ.
99. ರೋಗಿ 1246: ಕಲಬುರಗಿ 25 ವರ್ಷದ ಮಹಿಳೆ. ಮಹಾರಾಷ್ಟ್ರದ ಪುಣೆ ಪ್ರಯಾಣದ ಹಿನ್ನೆಲೆ.