– ಆರು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣ
ಬೆಂಗಳೂರು: ಇಂದು ರಾಜ್ಯದಲ್ಲಿ 1,857 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 30 ಜನರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಗುಣಮುಖರಾಗಿ 1,950 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 22,728 ಸಕ್ರಿಯ ಪ್ರಕರಣಗಳಿವೆ.
Advertisement
ಇದುವರೆಗೂ ರಾಜ್ಯದಲ್ಲಿ 29,24,732 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 26,911 ಮಂದಿ ಕೊರೊನಾದಿಂದಾಗಿ ಮೃತರಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ.1.61ರಷ್ಟಿದೆ. ಇಂದು ಒಟ್ಟು 1,61,275 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ರಾಜಧಾನಿ ಬೆಂಗಳೂರಿನಲ್ಲಿಂದು 321 ಜನಕ್ಕೆ ಸೋಂಕು ತಗುಲಿದ್ದು, ಐವರು ಮೃತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 9,193 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರಕ್ಕಿಂತಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿದೆ. ಇಂದು ದಕ್ಷಿಣ ಕನ್ನಡದಲ್ಲಿ 475 ಜನಕ್ಕೆ ಸೋಂಕು ತಗುಲಿದ್ರೆ, ಐವರು ಸಾವನ್ನಪ್ಪಿದ್ದಾರೆ. ಬೀದರ್, ಕೊಪ್ಪಳ ಮತ್ತು ಯಾದಗಿರಿಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.
Advertisement
ಯಾವ ಜಿಲ್ಲೆಯಲ್ಲಿ ಎಷ್ಟು?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 11, ಬಳ್ಳಾರಿ 3, ಬೆಳಗಾವಿ 45, ಬೆಂಗಳೂರು ಗ್ರಾಮಾಂತರ 44, ಬೆಂಗಳೂರು ನಗರ 321, ಬೀದರ್ 0, ಚಾಮರಾಜನಗರ 22, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 107, ಚಿತ್ರದುರ್ಗ 30, ದಕ್ಷಿಣ ಕನ್ನಡ 475, ದಾವಣಗೆರೆ 20, ಧಾರವಾಡ 9, ಗದಗ 4, ಹಾಸನ 123, ಹಾವೇರಿ 1, ಕಲಬುರಗಿ 4, ಕೊಡಗು 93, ಕೋಲಾರ 24, ಕೊಪ್ಪಳ 0, ಮಂಡ್ಯ 46, ಮೈಸೂರು 116, ರಾಯಚೂರು 2, ರಾಮನಗರ 3, ಶಿವಮೊಗ್ಗ 50, ತುಮಕೂರು 34, ಉಡುಪಿ 191, ಉತ್ತರ ಕನ್ನಡ 68, ವಿಜಯಪುರ 2 ಮತ್ತು ಯಾದಗಿರಿಯಲ್ಲಿ 0 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.