ಬೆಂಗಳೂರು: ರಾಜ್ಯದಲ್ಲಿಂದು 1,321 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 10 ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು 889 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8,93,006ಕ್ಕೆ ಏರಿಕೆಯಾಗಿದ್ದು, 25,381 ಸಕ್ರಿಯ ಪ್ರಕರಣಗಳಿವೆ. ಕೊರೊನಾಗೆ ಬಲಿಯಾದವರ ಸಂಖ್ಯೆ 11,856ಕ್ಕೆ ಏರಿಕೆಯಾಗಿದ್ದು, 280 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣ ಪ್ರಮಾಣ ಶೇ.1.33 ಮತ್ತು ಮರಣ ಪ್ರಮಾಣ ಶೇ.0.75ರಷ್ಟಿದೆ.
Advertisement
Advertisement
ರಾಜಾಧಾನಿ ಬೆಂಗಳೂರಿನಲ್ಲಿ 733 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,74,024ಕ್ಕೆ ಏರಿಕೆಯಾಗಿದ್ದು, 19,636 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ ಕೊರೊನಾ ಮಾಹಾಮಾರಿ 4,183 ಜನರನ್ನ ಬಲಿ ಪಡೆದುಕೊಂಡಿದೆ. ಇಂದು ರಾಜ್ಯದಲ್ಲಿ 99,320 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆ ನಡೆಸಲಾಗಿದೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 5, ಬಳ್ಳಾರಿ 28, ಬೆಳಗಾವಿ 19, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 733, ಬೀದರ್ 0, ಚಾಮರಾಜನಗರ 20, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 21, ಚಿತ್ರದುರ್ಗ 20, ದಕ್ಷಿಣ ಕನ್ನಡ 19, ದಾವಣಗೆರೆ 15, ಧಾರವಾಡ 20, ಗದಗ 8, ಹಾಸನ 41, ಹಾವೇರಿ 43, ಕಲಬುರಗಿ 23, ಕೊಡಗು 22, ಕೋಲಾರ 11, ಕೊಪ್ಪಳ 3, ಮಂಡ್ಯ 41, ಮೈಸೂರು 68, ರಾಯಚೂರು 23, ರಾಮನಗರ 2, ಶಿವಮೊಗ್ಗ 11, ತುಮಕೂರು 52, ಉಡುಪಿ 15, ಉತ್ತರ ಕನ್ನಡ 10, ವಿಜಯಪುರ 13 ಮತ್ತು ಯಾದಗಿರಿಯಲ್ಲಿ 15 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.