ಹೈದರಾಬಾದ್: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, 32 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಕುರಿತು ಎಐಎಂಐ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಪ್ರತಿಕ್ರಿಯೆ ನೀಡಿದ್ದು, ಇವತ್ತು ಭಾರತ ನ್ಯಾಯಾಂಗದಲ್ಲಿ ಕರಾಳ ದಿನ ಎಂದಿದ್ದಾರೆ.
Advertisement
ಸುಪ್ರೀಂಕೋರ್ಟ್ ಅಲ್ಲಿ ಮಸೀದಿಯನ್ನ ಕೆಡವಲಾಗಿದೆ ಎಂದು ಹೇಳಿದೆ. ಆದ್ರೆ ಇಂದು ಬಂದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನವಾಗಿ ದಾಖಲೆಯಾಗಲಿದೆ. ಅಲ್ಲಿ ಮೂರ್ತಿ ತಂದಿಟ್ಟಿದ್ಯಾರು? ಬೀಗ ಮುರಿದಿದ್ದು ಹೇಗೆ? ಮಸೀದಿ ಕೆಡವಿದ್ದು ಹೇಗೆ ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲವನ್ನು ಜಾದೂವಿನ ಮೂಲಕ ಮಾಡಲಾಯಿತಾ? ದೇಶದ ಇತಿಹಾಸದಲ್ಲಿ ಸೆಪ್ಟೆಂಬರ್ 30 ಕರಾಳ ದಿನವಾಗಿ ಉಳಿಯಲಿದೆ. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ವೇಳೆ ರಕ್ತದ ಹೊಳೆಯೇ ಹರಿದಿತ್ತು. ಎಲ್ಲ ಘಟನೆಗಳು ಪೂರ್ವಯೋಜಿತವಾಗಿದ್ರೂ, ಇಂದು ದಿಢೀರ್ ಎಲ್ಲವೂ ಬದಲಾಗಿದೆ ಎಂದು ಓವೈಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
https://twitter.com/aimim_national/status/1311223042740072448
Advertisement
ಬಾಬ್ರಿ ಮಸೀದಿ ಕೆಡವಿದಾಗ ಹೊರಗಡೆ ಸಿಹಿ ಹಂಚಿ ಸಂಭ್ರಮಿಸಲಾಗಿತ್ತು. ಉಮಾ ಭಾರತಿಜೀ ‘ಏಕ್ ಧಕ್ಕಾ ಔರ್ ದೋ, ಬಾಬರಿ ಮಸೀದಿ ಗಿರಾದೋ’ ಎಂದು ಘೋಷಣೆ ಕೂಗುತ್ತಿದ್ದರು. ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಮಂದಿರ ಕಟೋದಕ್ಕೆ ನಿರ್ಬಂಧವಿದೆಯೇ ಹೊರತು ಕಟ್ಟಡ ಬೀಳಿಸೋದಕ್ಕೆ ಅಲ್ಲ ಎಂಬ ಕಲ್ಯಾಣ್ ಸಿಂಗ್ ಹೇಳಿಕೆ ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿದೆ. 1992 ಡಿಸೆಂಬರ್ 5ರಂದು ವಿನಯ್ ಕಟಿಯಾರ್ ಅವರ ಮನೆಯಲ್ಲಿ ನಡೆದ ಬೈಟಕ್ ಗೆ ಎಲ್.ಕೆ.ಅಡ್ವಾಣಿ ಸಹ ಹಾಜರಾಗಿದ್ದರು ಎಂದು ಓವೈಸಿ ಆರೋಪಿಸಿದ್ದಾರೆ.
Advertisement
वही क़ातिल वही मुंसिफ़ अदालत उस की वो शाहिद
बहुत से फ़ैसलों में अब तरफ़-दारी भी होती है
— Asaduddin Owaisi (@asadowaisi) September 30, 2020
1992 ಡಿಸೆಂಬರ್ 6ರಂದು ಮಸೀದಿ ಉಳಿಸಿಕೊಳ್ಳಲಿಲ್ಲವಾ ಎಂದು ನೋವು ನಮ್ಮನ್ನು ಕಾಡಿತ್ತು. ಆದ್ರೆ ಇಂದು ಈ ರೀತಿಯ ತೀರ್ಪು ಬಂದಿದೆ. ಈ ಹಿಂದೆ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯನ್ನುತ ನಾಗರಿಕ ಪ್ರಶಸ್ತಿ ನೀಡಿದ್ದಾಗ ಅವರು ಆರೋಪಿ ಸ್ಥಾನದಲ್ಲಿದ್ದರು. ಆ ದಿನವೇ ಈ ಪ್ರಕರಣದ ತೀರ್ಪು ಏನು ಬರಲಿದೆ ಅಂತ ಊಹಿಸಲಾಗಿತ್ತು. ಆರೋಪಿಗಳು ನ್ಯಾಯಾಲಯಯದ ಹೊರಗೆ ನಿಂತು ತಮ್ಮ ತಪ್ಪನ್ನು ಮಾಧ್ಯಮಗಳ ಮುಂದೆ ಒಪ್ಪಿಕೊಳ್ಳುತ್ತಾರೆ. ಆದ್ರೆ ನ್ಯಾಯಾಲಯ ಅವರನ್ನ ಖುಲಾಸೆಗೊಳಿಸುತ್ತದೆ.
This is an issue of justice. This is an issue of ensuring that people who are responsible for Babri Masjid demolition should've been convicted. But they've been politically rewarded in the past by becoming HM & HRD minister. BJP is in power because of this issue: Asaduddin Owaisi pic.twitter.com/SflqR9bojw
— ANI (@ANI) September 30, 2020
ಈ ಸಮಸ್ಯೆಯಲ್ಲಿ ನ್ಯಾಯ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ತೀರ್ಪು ಅಂತಿಮವಾಗಿರುತ್ತದೆ. ಸಿಬಿಐ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೋ ಅಥವಾ ಇಲ್ಲ ಎಂಬುವುದು ನನಗೆ ಗೊತ್ತಿಲ್ಲ. ಒಂದು ಅಪೀಲ್ ಮಾಡಿದ್ರೂ ಯಾವಾಗ ಮಾಡುತ್ತೋ ಗೊತ್ತಿಲ್ಲ. ಈ ಸಂಬಂಧ ಸಿಬಿಐ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು. ಸರಿಯಾಗಿ ಯೋಚಿಸುವ ಪ್ರತಿ ದೇಶವಾಸಿಗೂ ಅರೇ ಏನಿದು ತೀರ್ಪು ಎಂದು ಪ್ರಶ್ನೆ ಮೂಡಿರುತ್ತದೆ ಎಂದರು. ಇದನ್ನೂ ಓದಿ: ಬಿಜೆಪಿ ಭೀಷ್ಮನಿಗೆ ಬಿಗ್ ರಿಲೀಫ್ – ಅಡ್ವಾಣಿ ಖುಲಾಸೆಯಾಗಿದ್ದು ಹೇಗೆ? ಕೋರ್ಟ್ ಹೇಳಿದ್ದು ಏನು?
ಒಂದು ವೇಳೆ ಸಿಬಿಐ ಮೇಲ್ಮನವಿ ಸಲ್ಲಿಸದಿದ್ರೆ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯರ ಜೊತೆ ಮಾತನಾಡಿ ಮೇಲ್ಮನವಿ ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ಎಷ್ಟೋ ಮೀಡಿಯಾ, ಪೊಲೀಸ್ ಸಿಬ್ಬಂದಿ ಮತ್ತು ನೂರಾರು ಜನರು ತಮ್ಮ ಜೀವವನ್ನ ಪಣಕ್ಕಿಟ್ಟು ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಅದಕ್ಕೆಲ್ಲ ಯಾವುದೇ ಬೆಲೆ ಇಲ್ವಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ