ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಲಘು ಹೃದಯಘಾತದಿಂದಾಗಿ ಶನಿವಾರ ನಗರದ ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿಸುತ್ತಿದ್ದ ವೈದ್ಯರ ತಂಡ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ಇಂದು ಇನ್ನೂ ಒಂದು ದಿನ ಆಸ್ಪತ್ರೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಿದೆ.
ವೈದ್ಯರು ಅಂಜಿಯೋಪ್ಲ್ಯಾಸ್ಟಿ ಮಾಡಿ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದರು. ಗಂಗೂಲಿ ಅವರ ಹೃದಯ ರಕ್ತನಾಳದಲ್ಲಿರುವ ಬ್ಲಾಕ್ಗಳನ್ನು ತೆರವುಗೊಳಿಸಿ ಒಂದು ಸ್ಟಂಟ್ ಅಳವಡಿಸಲಾಗಿತ್ತು. ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅವರು ವುಡ್ ಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿ ಗಂಗೂಲಿಯವರ ಆರೋಗ್ಯ ಪರಿಶೀಲಿಸಿದ್ದರು. ನಂತರ ಚಿಕಿತ್ಸೆ ನೀಡಿದ ವೈದ್ಯರ ತಂಡದ ಜೊತೆ ಚರ್ಚಿಸಿದ್ದ ದೇವಿ ಶೆಟ್ಟಿ ಬುಧವಾರ ಡಿಸ್ಚಾರ್ಚ್ ಮಾಡಲು ಸೂಚಿಸಿದ್ದರು.
Advertisement
Advertisement
ಗಂಗೂಲಿ ತನ್ನ ಆರೋಗ್ಯ ಸ್ಥಿತಿ ಸರಿಹೊಂದಿದ್ದರೂ ಕೂಡ ಇನ್ನೂ ಒಂದು ದಿನ ಆಸ್ಪತ್ರೆಯಲ್ಲೇ ಇರಲು ಸ್ವತಃ ನಿರ್ಧಾರ ಮಾಡಿರುವುದರಿಂದಾಗಿ ಸಿಬ್ಬಂದಿ ತಿಳಿಸಿದ್ದಾರೆ.
Advertisement
ಅಸ್ಪತ್ರೆಯ ವೈದ್ಯಕೀಯ ಮಂಡಳಿ ಗಂಗೂಲಿಯ ವೈದ್ಯಕೀಯ ದಾಖಲೆಗಳು ಮತ್ತು ಅವರ ಸ್ಥಿತಿಯ ಕುರಿತು ಕೆಲವು ತಜ್ಞ ವೈದ್ಯರೊಂದಿಗೆ ವಿಡಿಯೋ ಕಾಲಿಂಗ್ನಲ್ಲಿ ಚರ್ಚಿಸಿತ್ತು. ನಂತರ ವುಡ್ಲ್ಯಾಂಡ್ಸ್ ಆಸ್ಪತ್ರೆಯ ಎಂಡಿ ಹಾಗೂ ಸಿಇಓ ಡಾ. ರೂಪಾಲಿ ಬಸು, ಮಾತಾನಾಡಿ ಗಂಗೂಲಿಯವರು ಇಲ್ಲಿಂದ ಮನೆಗೆ ತರಳಿದ ನಂತರವೂ ಮನೆಯಲ್ಲಿ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದಿದ್ದರು.
Advertisement