ದಾಸರಹಳ್ಳಿ: ಕೊರೊನಾ ಲಾಕ್ಡೌನ್ನಿಂದ ಮುಚ್ಚಿದ್ದ ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಇಂದಿನಿಂದ ದೇವಾಲಯಗಳನ್ನು ತರೆಯಲಾಗಿದ್ದು, ದೇವಾಸ್ಥಾನವೊಂದರಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ಪ್ರತ್ಯಕ್ಷವಾಗಿದೆ.
Advertisement
ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿರುವ ರಾಜಮಾತ ಉಚ್ಛಂಗಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಬಂದಂತಹ ಭಕ್ತಾದಿಗಳಿಗೆ ಅಚ್ಚರಿಯೇ ಕಾದಿದ್ದು, ದೇವರ ಗರ್ಭಗುಡಿಯ ಮೇಲೆ ಅಚ್ಚರಿ ರೂಪದಲ್ಲಿ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆ ದರ್ಶನವನ್ನು ನೀಡಿದೆ.
Advertisement
Advertisement
ಶುಭ ಸಂಕೇತವಾಗಿ ದೇವಸ್ಥಾನದ ಅರ್ಚಕ ಲಕ್ಷ್ಮಿ ಸ್ವರೂಪಳಾದ ಬಿಳಿ ಗೂಬೆಗೆ ಪೂಜೆಯನ್ನು ಕೂಡ ಸಲ್ಲಿಸಿದ್ದಾರೆ. ಪೂಜೆಯನ್ನು ಸಲ್ಲಿಸಿದರೂ ಕೂಡ ಬಿಳಿ ಗೂಬೆ ದೇವಸ್ಥಾನವನ್ನು ಬಿಟ್ಟು ತೆರಳಲಿಲ್ಲ. ಸದ್ಯ ದೇವಸ್ಥಾನದ ವತಿಯಿಂದ ಬೇಕಾದ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ ಹಾಗೂ ದೇವಾಲಯಕ್ಕೆ ಬಂದಂತಹ ಭಕ್ತಾದಿಗಳಿಗೆ ಮಂಗಳಾರತಿ ಮಾತ್ರ ನೀಡಲಾಗುತ್ತಿದೆ. ಅಲ್ಲದೇ ದೇವಸ್ಥಾನದಲ್ಲಿ ಯಾವುದೇ ವಿಶೇಷ ಪೂಜೆಯನ್ನು ಹಾಗೂ ದೇವರ ಪ್ರಸಾದವನ್ನು ಕೂಡ ನೀಡಲಾಗುತ್ತಿಲ್ಲ. ದೇವಸ್ಥಾನಕ್ಕೆ ನಿಧಾನವಾಗಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬಯಲು ಆಂಜನೇಯ ದೇವಾಲಯದಲ್ಲಿ ಪೂಜೆ ಪುರಸ್ಕಾರ- ಭಕ್ತರ ಸಂಖ್ಯೆ ಇಳಿಕೆ
Advertisement