ಹಾವೇರಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಕುಮಾರ ಗುಡದಳ್ಳಿ ಹಾಗೂ ಪೂರ್ಣಿಮಾ ದಂಪತಿಯ ಮಗಳಾದ 8 ವರ್ಷದ ನಮ್ರತಾ ಕುಮಾರ ಗುಡದಳ್ಳಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ನಮ್ರತಾ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಕ್ಕಿಆಲೂರಿನಲ್ಲಿ ಓದುತ್ತಿದ್ದಾಳೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ತನ್ನ ಹೆಸರನ್ನು ದಾಖಲಿಸಲು ಹಲವರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾಳೆ. 28 ರಾಜ್ಯಗಳು ಅವುಗಳ ರಾಜಧಾನಿಗಳು, 9 ಕೇಂದ್ರಾಡಳಿತ ಪ್ರದೇಶಗಳು ಅವುಗಳ ರಾಜಧಾನಿಗಳು, ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು, ಕರ್ನಾಟಕದ ಜಿಲ್ಲೆಗಳು ಮತ್ತು ಮಹಾನಗರ ಪಾಲಿಕೆಗಳು, ಖಂಡಗಳು, ಮಹಾಸಾಗರಗಳು, ಸೌರವ್ಯೂಹದ ಗ್ರಹಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನು ಹೇಳುತ್ತಾಳೆ.
Advertisement
ಗಾದೆಮಾತುಗಳು, ಕರ್ನಾಟಕದ ರಾಜಮನೆತನಗಳು, ನದಿಗಳು, 100 ಸಾಮಾನ್ಯ ಜ್ಞಾನದ ಪ್ರಶೋತ್ತರಗಳು, 1ರಿಂದ 20ರ ವರೆಗಿನ ಮಗ್ಗಿಗಳು, 1ರಿಂದ 100ರ ವರೆಗಿನ ಸಮ-ಬೆಸ ಸಂಖ್ಯೆಗಳು, 100 ರಿಂದ 1ರ ವರೆಗಿನ ಬ್ಯಾಕ್ವರ್ಡ್ ನಂಬರ್ 50 ಅಪೋಸಿಟ್ ವಡ್ರ್ಸ್, ಗಣಿತದ ಚಿಹ್ನೆಗಳು, ಆಕಾರಗಳು ಗುರುತಿಸೋದು ಇವೆಲ್ಲವುಗಳನ್ನು ಪರಿಶೀಲಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಿಸಿದೆ.