– ದಾಖಲೆ ಬರೆದ ವಿರಾಟ್
ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 224 ರನ್ ಪೇರಿಸಿದ್ದು, ಇಂಗ್ಲೆಂಡ್ 225 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದೆ.
ಟಾಸ್ ಸೋತ ಟೀಂ ಇಂಡಿಯಾ ಮೊದಲಿಗೆ ಬ್ಯಾಟಿಂಗ್ ಆರಂಭಿಸಿತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅರ್ಧ ಶತಕ ದಾಖಲಿಸಿದರು. ವಿರಾಟ್ 52 ಎಸೆತದಲ್ಲಿ 80 ರನ್ ಮತ್ತು ರೋಹಿತ್ ಶರ್ಮಾ 34 ಎಸೆತದಲ್ಲಿ 64 ರನ್ ಸೇರಿಸುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾದ್ರು.
Advertisement
The skipper joins the party ????
Virat Kohli brings up his half-century!#INDvENG | https://t.co/7vTTjtwucR pic.twitter.com/MR21VXHSLz
— ICC (@ICC) March 20, 2021
Advertisement
ವಿರಾಟ್ ಕೊಹ್ಲಿ ಟಿ20ಯಲ್ಲಿ 12 ಅರ್ಧ ಶತಕ ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಬರೆದರು. ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸ್ 11 ಅರ್ಧ ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ಅರೋನ್ ಪಿಂಚ್ 10 ಅರ್ಧ ಶತಕ ದಾಖಲಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 17 ಎಸೆತದಲ್ಲಿ 32 ಮತ್ತು ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 39 ರನ್ ಪೇರಿಸಿದರು.
Advertisement
Fifty up for Rohit Sharma!
The India opener gets to the mark with a SIX ????#INDvENG | https://t.co/7vTTjtwucR pic.twitter.com/Bm0LhhxuCt
— ICC (@ICC) March 20, 2021