ಬೆಂಗಳೂರು: ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆಯ ಹೊಡೆಯಬೇಡಿ. ವ್ಯಾಕ್ಸಿನ್ ಬರ್ತಾ ಇದ್ದಂತೆ ಎಲ್ಲರಿಗೂ ಕೊಡ್ತೇವೆ, ಸಹಕರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಕ್ಸಿನ್ ಬಗ್ಗೆ ಸಮಸ್ಯೆ ಇಲ್ಲ. ಗೊಂದಲ ಬೇಡ, ಆತಂಕ ಬೇಡ ಎಂದು ಮನವಿ ಮಾಡಿಕೊಂಡರು.
Advertisement
Advertisement
ವಾರ್ ರೂಂಗಳಿಗೆ ಭೇಟಿ ಕೊಡ್ತೀನಿ. ಕೊರೊನಾ ಸ್ವಲ್ಪ ಕಂಟ್ರೋಲ್ ಗೆ ಬರ್ತಿದೆ, ಜನ ಸಹಕಾರ ಕೊಟ್ಟರೆ ಅನುಕೂಲ. ದೇಶದಲ್ಲಿ ಕೊರೊನಾ ಹೆಚ್ಚಳ ಆಗ್ತಿರೋದು ನಮ್ಮ ರಾಜ್ಯದಲ್ಲಿ ಮಾತ್ರ, ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಜನರ ಸಹಕಾರದಿಂದ ಕೊರೊನಾ ಕಂಟ್ರೋಲ್ ಮಾಡಬಹುದು ಎಂದರು.
Advertisement
ದೆಹಲಿಗೆ ಏಕೆ ಹೋಗಬೇಕು. ಏನೂ ಅಗತ್ಯ ಇಲ್ಲ ರೀ, ದೆಹಲಿ ಸಂಪರ್ಕದಲ್ಲಿ ಇದ್ದೇನೆ. ಪ್ರಧಾನಿ ಅವರ ಜೊತೆಯೂ ಮಾತಾಡಿದ್ದೇನೆ. ಕೇಂದ್ರ ಸಹಕಾರ ಕೊಡ್ತಿದೆ. ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಸಿಎಂ ತಿಳಿಸಿದರು.
Advertisement
ಬಿ.ಎಲ್.ಸಂತೋಷ್ ಬಂದಿದ್ರು. ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ರು. ಇಲ್ಲಿ ಯಾವ ಸಮಸ್ಯೆ ಇದೆ ಅನ್ನೋದನ್ನ ಕುರಿತು ಚರ್ಚೆ ಮಾಡಿದ್ರು. ದೆಹಲಿಯಿಂದ ಏನೆಲ್ಲ ಸಹಾಯಬೇಕು ಅಂತಾ ಕೇಳಿದ್ರೆ ಕೊಡುತ್ತೇವೆ ಅಂತ ಹೇಳಿದ್ದಾರೆ ಅಂದ್ರು.
ವಾರ್ ರೂಮ್ ವೀಕ್ಷಣೆ ಮಾಡಿದ್ದೇನೆ. ದೇಶದಲ್ಲೇ ಈ ರೀತಿ ವಾರ್ ರೂಮ್ ಎಲ್ಲೂ ಇಲ್ಲ. ಕೆಲವರು ಹುಷಾರ್ ಆಗಿ ಇಪ್ಪತ್ತು ದಿನ ಆದ್ರೂ ಬೆಡ್ ಖಾಲಿ ಮಾಡಿಲ್ಲ. ಆ ರೀತಿ 503 ಜನ ಇದ್ದಾರೆ. ಹುಷಾರು ಆದವರು ಬೆಡ್ ಬಿಟ್ಟು ಇನ್ನೊಬ್ಬರಿಗೆ ಸಹಕಾರಿ ಆಗಬೇಕು. ಮನೆಗೆ ಹೋಗಿ ಎಂದು ವೈದ್ಯರು ಹೇಳಿದ್ರು ಕೆಲವರು ಹೋಗುವುದಿಲ್ಲ. ಹೀಗಾಗಿ ಈಗ ಸೂಚನೆ ನೀಡಿದ್ದೇವೆ ಎಂದರು.