ಕೊಪ್ಪಳ: ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೊರೊನಾ ಸೋಂಕಿತ ಹೊರಗಡೆ ಹೋಗಿ ಒದ್ದಾಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಗಂಗಾವತಿಯಲ್ಲಿ ಘಟನೆ ನಡೆದಿದ್ದು, ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಹೊರಗಡೆ ಬಿದ್ದು 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ಹಿಂದಿನ ಕಾಂಪೌಡ್ ಮೇಲಿಂದ ಜಿಗ್ಗಿದು ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಘಟನೆ ಸಂಭವಿಸಿದೆ. ತಪ್ಪಿಸಿಕೊಂಡು ಹೊರಗಡೆ ಹೋಗಿ ಒದ್ದಾಡಿ ಸೋಂಕಿತ ಸಾವನ್ನಪ್ಪಿದ್ದಾನೆ.
Advertisement
Advertisement
ವ್ಯಕ್ತಿ ಬಿದ್ದಿದ್ದನ್ನು ಗಮನಿಸಿ ಸ್ಥಳೀಯರು ವೈದ್ಯರಿಗೆ ಮಾಹಿತಿ ನೀಡಿದ್ದು, ಉಪವಿಭಾಗ ಆಸ್ಪತ್ರೆ ಸಿಬ್ಬಂದಿ ಶವ ತಗೆದುಕೊಂಡು ಹೋಗಿದ್ದಾರೆ. ನಂತರ ಶವ ಬಿದ್ದ ಏರಿಯಾವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ. ವ್ಯಕ್ತಿ ಯಾವ ಕಾರಣಕ್ಕೆ ತಪ್ಪಿಸಿಕೊಳ್ಳಲು ಯತ್ನಿಸಿದ ಎಂಬುದು ತಿಳಿದಿಲ್ಲ. ಈ ಘಟನೆಯಿಂದಾಗಿ ಸ್ಥಳೀಯರು ಆತಂಕಕ್ಕೀಡಾಗಿದ್ದು, ಸ್ಯಾನಿಟೈಸ್ ಮಾಡಿದರೂ ಅತ್ತ ಸುಳಿಯುತ್ತಿಲ್ಲ.