– ಕಾರ್ಯರೂಪಕ್ಕೆ ಬರುತ್ತಾ ಈ ಯೋಜನೆ
– ತಜ್ಞರಿಂದ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ಮಹಾಮಾರಿ ಕೊರೊನಾ ರುದ್ರ ನರ್ತನ ಮುಂದುವರಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ದೇಶದಲ್ಲಿ ಕೊರೊನಾದ ಅಟ್ಟಹಾಸ ಜೋರಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಒಂದು ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.
Advertisement
ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ರಾಜ್ಯದಲ್ಲಿ 6 ಲಕ್ಷದ ಗಡಿ ಬಳಿ ಸೋಂಕಿತರ ಸಂಖ್ಯೆ ಬಂದು ತಲುಪಿದೆ. ಬೆಂಗಳೂರು ಮಹಾನಗರದಲ್ಲಿ 2.5 ಲಕ್ಷದ ಬಳಿ ಬಂದಿದೆ. ಇದರಿಂದ ಆರೋಗ್ಯ ಇಲಾಖೆ ಇನ್ಮುಂದೆ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ ಆರೈಕೆಯನ್ನು ಅವರ ಕುಟುಂಬದವರಿಂದ ಮಾಡಿಸುವ ಪ್ಲ್ಯಾನ್ ಮಾಡಿದೆ. ಆರೋಗ್ಯ ಇಲಾಖೆಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement
Advertisement
ಏನಿದು ಸಂಬಂಧಿಕರಿಂದ ಆರೈಕೆ ಪ್ಲ್ಯಾನ್?
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸಂಬಂಧಿಕರಿಂದಲೇ ಆರೈಕೆ ಮಾಡಿಸುವುದಾಗಿದೆ. ಸಂಬಂಧಿಕರು ರೋಗಿಯ ಆರೈಕೆ ಮಾಡುವುದು ಉತ್ತಮ ಅಂತ ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧಿಕರು ಸೋಂಕಿತರ ಜೊತೆಗಿದ್ದರೆ ಮಾನಸಿಕವಾಗಿ ಬೇಗ ಚೇತರಿಕೆ ಕಾಣಬಹುದು. ಇದಕ್ಕೆ ಸಂಬಂಧಿಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕಾಗುತ್ತದೆ. ಪಿಪಿಇ ಕಿಟ್ ಧರಿಸಿಕೊಂಡು ಆರೈಕೆ ಬಗ್ಗೆ ಮಾಹಿತಿ ನೀಡಬೇಕು.
Advertisement
ಸೋಂಕಿತರಿಗೆ ಮನೆಯಿಂದ ಊಟ ತರಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸಂಬಂಧಿಕರು ಜೊತೆಗಿದ್ದರೆ ಕೊರೊನಾ ಸೋಂಕಿತರಿಗೆ ಖಿನ್ನತೆ ಕಡಿಮೆಯಾಗಿ ಮನೋಧೈರ್ಯ ಹೆಚ್ಚಳವಾಗುತ್ತದೆ. ಆದರೆ ಐಸೋಲೇಷನ್ನಲ್ಲಿರೋ ವ್ಯಕ್ತಿಯನ್ನು ಭೇಟಿಯಾಗಲು ಸಂಬಂಧಿಕರಿಗೆ ಅವಕಾಶ ಇರುವುದಿಲ್ಲ. ಆದರೆ ಸೋಂಕಿತರನ್ನು ನೋಡಿಕೊಳ್ಳುವ ಸಂಬಂಧಿಕರಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದೇ ಆರೋಗ್ಯ ಇಲಾಖೆಗೆ ಒಂದು ಸವಾಲಾಗುತ್ತದೆ.
ಸಂಬಂಧಿಕರ ಆರೈಕೆ ಬಗ್ಗೆ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ
ಸೋಂಕಿತ ವ್ಯಕ್ತಿಗೆ ಕುಟುಂಬ ಸದಸ್ಯರು ಆರೈಕೆ ಮಾಡುವುದು ಸೂಕ್ತವಲ್ಲ. ಯಾಕೆಂದರೆ ಸೋಂಕಿತ ವ್ಯಕ್ತಿಯನ್ನ ಭೇಟಿ ಮಾಡುವುದರಿಂದ ಕುಟುಂಬದ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಸೋಂಕಿತ ವ್ಯಕ್ತಿಯ ಆರೈಕೆಗೆ ವೈದ್ಯಕೀಯ ಸಿಬ್ಬಂದಿ ತರಬೇತಿ ಪಡೆದಿರುತ್ತಾರೆ. ಜೊತೆಗೆ ವೈದ್ಯಕೀಯ ಸಿಬ್ಬಂದಿ ತಮಗೆ ಸೋಂಕು ಹರಡದಂತೆ ಎಚ್ಚರ ವಹಿಸುತ್ತಾರೆ. ಆದರೆ ರೋಗಿಯ ಸಂಬಂಧಿಕರು ರೋಗಿಯನ್ನು ನೋಡಿದಾಗ ಭಾವನಾತ್ಮಕವಾಗಿ ವರ್ತಿಸಬಹುದು. ಇವರಿಗೆ ಯಾವುದೇ ರೀತಿಯ ತರಬೇತಿ ಕೂಡ ಬರುವುದಿಲ್ಲ. ಆದ್ದರಿಂದ ಸಂಬಂಧಿಕರು ರೋಗಿಯನ್ನ ಮುಟ್ಟೋದು ಮಾಡಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಬಹುದು ಎಂದು ಕೆಲ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ರೋಗಿಯ ಆರೈಕೆಯನ್ನ ಸಂಬಂಧಿಕರು ಮಾಡುವುದು ಒಂದು ರೀತಿಯಲ್ಲಿ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕಾಗುತ್ತೆ. ಪಿಪಿಇ ಕಿಟ್ ಧರಸಿಕೊಂಡು ಸಂಬಂಧಿಕರ ಆರೈಕೆ ಮಾಡುವುದನ್ನ ತಿಳಿಸಿಕೊಡಬೇಕಾಗುತ್ತೆ. ಜೊತೆಗೆ ಮನೆಯಿಂದ ಊಟ ನೀಡಲು ವ್ಯವಸ್ಥೆ ಮಾಡಬಹುದು. ಇದರಿಂದ ರೋಗಿಗೆ ಮನೋಧೈರ್ಯ ಹೆಚ್ಚಾಗಲಿದೆ. ಅಲ್ಲದೇ ಮನಸಿಕ ಖಿನ್ನತೆ ಕಡಿಮೆಯಾಗುತ್ತದೆ ಎಂದಿದ್ದಾರೆ.
ಐಸೋಲೇಷನ್ನಲ್ಲಿರುವ ವ್ಯಕ್ತಿಯನ್ನ ಭೇಟಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ಆರೋಗ್ಯ ಇಲಾಖೆ, ಆಸ್ಪತ್ರೆಯ ಸಿಬ್ಬಂದಿ ಸಂಬಂಧಿಕರಿಗೆ ಕೊರೊನಾ ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕೆವಹಿಸದೇ ಬೇಕಾಬಿಟ್ಟಿಯಾಗಿ ರೋಗಿಯ ಆರೈಕೆ ಮಾಡಲು ಸಂಬಂಧಿಕರನ್ನ ಬಿಡುವುದು ಕೊರೊನಾ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತೆ. ಸೋಂಕಿತ ವ್ಯಕ್ತಿಯ ಆರೈಕೆಯನ್ನ ಸಂಬಂಧಿಕರು ಮಾಡುವುದು ರೋಗಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.