ಸಿಡ್ನಿ: ಮೂರು ಮಾದರಿಯ ಸರಣಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ತೆರಳಿರುವ ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ಬಂದಿದ್ದು, ಎಲ್ಲ ಆಟಗಾರರ ರಿಪೋರ್ಟ್ ನೆಗೆಟಿವ್ ಬಂದಿದೆ.
ಕಳೆದ ಎರಡು ತಿಂಗಳಿಂದ ಯುಎಇಯಲ್ಲಿ ನಡೆದ ಐಪಿಎಎಲ್-2020ಯಲ್ಲಿ ನಿರತರಾಗಿದ್ದ ಭಾರತದ ಆಟಗಾರರು, ವಾಪಸ್ ತವರಿಗೂ ಬಾರದೇ ಯುಎಇಯಿಂದಲೇ ಆಸ್ಟ್ರೇಲಿಯಾಕ್ಕೆ ಹಾರಿದ್ದರು. ಆಸ್ಟ್ರೇಲಿಯಾ ತಲುಪಿದ ಬಳಿಕ ಪ್ರತ್ಯೇಕ ರೂಮಿನಲ್ಲಿ ಕ್ವಾರಂಟೈನ್ ಕೂಡ ಆಗಿದ್ದರು. ಈಗ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ.
Advertisement
Two days off the plane and #TeamIndia had their first outdoor session today. A bit of ???? to get the body moving! #AUSIND pic.twitter.com/GQkvCU6m15
— BCCI (@BCCI) November 14, 2020
Advertisement
ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದೆ. ಜೊತೆಗೆ ಎರಡು ದಿನದ ಬಳಿಕ ಟೀಂ ಇಂಡಿಯಾ ಮೊದಲ ಹೊರಾಂಗಣ ಅಭ್ಯಾಸವನ್ನು ಆರಂಭ ಮಾಡಿದೆ ಎಂದು ಟ್ವೀಟ್ ಮಾಡಿ, ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಜೊತೆಗೆ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಟ್ವೀಟ್ ಮಾಡಿ ಬ್ಯಾಕ್ ಟೂ ನ್ಯಾಷನಲ್ ಡ್ಯೂಟಿ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಐಪಿಎಲ್ ಮುಗಿಯುವ ಮುನ್ನವೇ ಬಿಸಿಸಿಐ ಮೂರು ಮಾದರಿ ಕ್ರಿಕೆಟ್‍ಗೆ ತಂಡಗಳನ್ನು ಘೋಷಣೆ ಮಾಡಿತ್ತು.