ಬೆಂಗಳೂರು: ಆರ್ಆರ್ನಗರ ಹಾಗೂ ಶಿರಾ ಉಪಚುನಾವಣೆಯ ಫೈಟ್ ‘ಮಹಾ’ ಕುರುಕ್ಷೇತ್ರ ರೂಪ ಪಡೆದಿದೆ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ರಣತಂತ್ರ ಹೂಡಿದೆ.
ಬಿಜೆಪಿ ಹೈಕಮಾಂಡ್ ಎರಡು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ದು, ಆರ್ಆರ್ ನಗರ ಹಾಗೂ ಶಿರಾ ಕ್ಷೇತ್ರಗಳ ಮೇಲೆ ಕಣ್ಗಾವಲಿನ ಮೇಲೆ ಕಣ್ಗಾವಲು ಇಡಲಾಗಿದೆ. ಮತದಾನಕ್ಕೂ ಮುನ್ನ, ಕಡೆಯ 5 ದಿನಗಳ ಕಡೆ ತಂತ್ರಗಾರಿಕೆಯನ್ನೇ ಬದಲಿಸಲು ಪ್ಲಾನ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಈಗಾಗಲೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೊರಗಿನವರು ಬಂದು ಚುನಾವಣೆ ನಡೆಸ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಬೆನ್ನಲ್ಲೇ ರಾಜರಾಜೇಶ್ವರಿನಗರ, ಶಿರಾ ಕ್ಷೇತ್ರಗಳಲ್ಲಿ ಬೂತ್ ಕಾಯಲು ಕಾವಲುಗಾರರನ್ನು ನೇಮಿಸಲಾಗಿದೆ. ಪ್ರತಿ ಬೂತ್ ಗೆ 5 ಜನ ಕಣ್ಗಾವಲು ಸದಸ್ಯರು, ಕಡೆಯ 5 ದಿನ ಕಣ್ಗಾವಲು ಹಾಕಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
Advertisement
ಹೊರಗಿನಿಂದ ಬಂದವರು, ವಿರೋಧಿಗಳ ನಡವಳಿಕೆ ಗಮನಿಸಲು ಪಂಚ ಪರಮೇಶ್ವರರ ತಂತ್ರವನ್ನು ಬಿಜೆಪಿ ಹೂಡಿದೆ. ಹಾಗಾದ್ರೆ ಬೈ ಎಲೆಕ್ಷನ್ ನಲ್ಲಿ ಒಂದು ಬೂತ್, 5 ದಿನ, 5 ಜನ ತಂತ್ರ ಸಕ್ಸಸ್ ಆಗುತ್ತಾ ಎಂಬ ಕುತೂಹಲ ಮೂಡಿಸಿದೆ.