– ರಾಹುಲ್ 3ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ
ನವದೆಹಲಿ: ಇಂದು ನಡೆಯಲಿರುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡಕ್ಕಾಗಿ ಮಯಾಂಕ್ ಅಗರ್ವಾಲ್ ಜೊತೆ ಕ್ರಿಸ್ ಗೇಲ್ ಓಪನರ್ ಆಗಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಇಂದು ಐಪಿಎಲ್-2020ಯ 31ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಆಡಿದ ಏಳು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಸೋಲಿನ ಸುಳಿಯಲ್ಲಿರುವ ರಾಹುಲ್ ಪಡೆ, ಗೆಲುವಿನ ಹುಡುಕಾಟದಲ್ಲಿದೆ. ಇತ್ತ ಐದು ಪಂದ್ಯಗಳನ್ನು ಗೆದ್ದು ಬೀಗಿರುವ ಕೊಹ್ಲಿ ಪಡೆ ಗೆಲುವಿನ ನಾಗಲೋಟವನ್ನು ಮುಂದುವರಿಸುವ ತವಕದಲ್ಲಿದೆ.
Advertisement
Advertisement
ಐಪಿಎಲ್ ಬಗ್ಗೆ ತಮ್ಮ ಯೂಟ್ಯೂಬ್ ಶೋ ವಿರು ಕಿ ಬೈಥಕ್ನಲ್ಲಿ ಮಾತನಾಡಿರುವ ಸೆಹ್ವಾಗ್, ಬೆಂಗಳೂರು ವಿರುದ್ಧ ಗೇಲ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 54 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಎಲ್ಲಾ ಬೌಲರ್ ಗಳಿಗೆ ತಿಳಿದಿದೆ. ಈ ಕಾರಣದಿಂದ ಇಂದಿನ ಪಂದ್ಯದಲ್ಲಿ ಗೇಲ್ ಸೀರಿಯಸ್ ಮ್ಯಾನ್ ಮಾಯಾಂಕ್ ಅಗರ್ವಾಲ್ ಅವರೊಂದಿಗೆ ಓಪನರ್ ಆಗಿ ಬರಬೇಕು. ನಂತರ ಕೆಎಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ತಂಡ ಬ್ಯಾಲೆನ್ಸ್ ಆಗಿ ಕಾಣುತ್ತೆ ಎಂದಿದ್ದಾರೆ.
Advertisement
https://www.instagram.com/p/CGWj-lRgWRV/
Advertisement
ಕಳೆದ ಐದು ದಿನದ ಹಿಂದೆ ಕ್ರಿಸ್ ಗೇಲ್ ಅವರಿಗೆ ಫುಡ್ ಪಾಯಿಸನ್ ಆಗಿತ್ತು. ಈ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆನೋವಿನ ಕಾರಣದಿಂದ ಕ್ರಿಸ್ ಗೇಲ್ ಅವರು ಎರಡು ಪಂದ್ಯಗಳಿಂದ ಹೊರಗೆ ಉಳಿದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಗಳಿಗೆ ಗೇಲ್ ಲಭ್ಯವಿರಲಿಲ್ಲ. ಆದರೆ ಈಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಕ್ರಿಸ್ ಗೇಲ್ ಐಪಿಎಲ್ನಲ್ಲಿ 125 ಪಂದ್ಯಗಳಲ್ಲಿ 4484 ರನ್ ಗಳಿಸಿ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದವರ ಪೈಕಿ 9 ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 28 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸರ್ (326), ಸತಿ ಹೆಚ್ಚು ಶತಕಗಳು (6), ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (175 ನಾಟ್ ಔಟ್) ಸೇರಿದಂತೆ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ.