ಅಬುಧಾಬಿ: ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್ ಅವರು ಇಂದು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಸ್ವೀಕರಿಸಿದ್ದಾರೆ.
ಈಗ ಐಪಿಎಲ್ ಆಟಗಾರರು ತಮ್ಮ ಗಡ್ಡಕ್ಕೆ ಹೊಸ ರೂಪ ಕೊಡುವ ಸಲುವಾಗಿ ಬ್ರೇಕ್ ದಿ ಬಿಯರ್ಡ್ ಎಂಬ ಹೊಸ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲು ಇದನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದರು. ನಂತರ ಕೀರನ್ ಪೊಲಾರ್ಡ್ ಅವರು ಇದನ್ನು ಸ್ವೀಕರಿಸಿದ್ದರು. ನಂತರ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ಇವೆರೆಲ್ಲರ ನಂತರ ಈಗ ಎಬಿಡಿ ಅವರು ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿದ್ದಾರೆ.
Advertisement
“Change is the only constant” they say. Took this thought a bit seriously and decided to sport a new style! ???? what say @dk00019 @kieron.pollard55 @fafdup @krunalpandya_official.
Can't wait to see who picks up this baton next! #BreakTheBeard #ipl2020
@break_the_beard pic.twitter.com/0WP8yWRa7W
— AB de Villiers (@ABdeVilliers17) October 13, 2020
Advertisement
ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿಕೊಂಡಿರುವ ಎಬಿಡಿ, ಅವರು ಹೇಳಿದಂತೆ ಬದಲಾವಣೆಯನ್ನು ಮಾಡಿದ್ದೇನೆ. ಅವರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡು ಹೊಸ ಶೈಲಿಯಲ್ಲಿ ನ್ಯೂ ಸ್ಟೈಲ್ ಅನ್ನು ಮಾಡಿದ್ದೇನೆ. ಈ ಹೊಸ ಶೈಲಿ ಮತ್ತು ಸನ್ ಗ್ಲಾಸಸ್ ಹೇಗಿರುತ್ತೆ ಎಂದು ಬರೆದು ದಿನೇಶ್ ಕಾರ್ತಿಕ್ ಮತ್ತು ಕೀರನ್ ಪೊಲಾರ್ಡ್ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಟ್ಯಾಗ್ ಮಾಡಿದ್ದಾರೆ.
Advertisement
https://www.instagram.com/p/CGB2ehXAs6N/
Advertisement
ಇದರ ಜೊತೆಗೆ ನನ್ನ ನಂತರ ಮುಂದಿನ ವಾರದಲ್ಲಿ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಯಾರು ಸ್ವೀಕರಿಸುತ್ತಾರೆ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಕಳೆದ ವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಕೂಡ ಈ ಚಾಲೆಂಜ್ ಮಾಡಿದ್ದರು. ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದರು.
ಕಳೆದ ಪಂದ್ಯನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಎಬಿಡಿ ವಿಲಿಯರ್ಸ್ ತಾವು ಆಡಿದ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ ಭರ್ಜರಿ 73 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿಯವರು 28 ಬಾಲಿಗೆ 33 ರನ್ ಸಿಡಿಸಿದರು. ಈ ಮೂಲಕ ಕೋಲ್ಕತ್ತಾಗೆ 195 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬೆಂಗಳೂರು ಬೌಲರ್ ಗಳ ದಾಳಿಗೆ ತತ್ತರಿಸಿ 20 ಓವರಿನಲ್ಲಿ ಕೇವಲ 112 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.