ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ಆರತಕ್ಷತೆ ಕಾರ್ಯಕ್ರಮ ಇಂದು ದೇವನಹಳ್ಳಿಯ ರೆಸಾರ್ಟಿನಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ವಧು-ವರರರಿಗೆ ಶುಭ ಹಾರೈಸಿದ್ದಾರೆ.
Advertisement
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ರಾಹುಲ್ ಹಾಗೂ ಪ್ರಿಯಾಂಕಾ ಕಾರ್ಯಕ್ರಮ ನಡೆಯುತ್ತಿರುವ ರೆಸಾರ್ಟಿಗೆ ತೆರಳಿದ್ದಾರೆ. ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ರೆಸಾರ್ಟ್ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
Advertisement
ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೆಸಾರ್ಟಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 70 ಮಂದಿ ಸಿಬ್ಬಂದಿಗೆ ಸೋಮವಾರದಿಂದಲೇ ರಜೆ ನೀಡಲಾಗಿದೆ. ಯಾಕಂದರೆ ಕಾರ್ಯಕ್ರಮದ ಯಾವುದೇ ವೀಡಿಯೋ, ಫೋಟೋ ಹಾಗೂ ಮಾಹಿತಿ ಸೋರಿಕೆಯಾಗದಿರಲಿ ಎಂಬ ನಿಟ್ಟಿನಲ್ಲಿ ರಜೆ ಘೋಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ವಾಜುಭಾಯ್ ವಾಲಾ, ಕಟ್ಟಾ ಸುಬ್ರಮಣ್ಯ ನಾಯ್ಡು, ಶಿವರಾಂ ಹೆಬ್ಬಾರ್, ಚೆಲುವರಾಯಸ್ವಾಮಿ ಅಶೋಕ್, ಬೈರತಿ ಬಸವರಾಜ್, ಲಕ್ಷ್ಮಣ್ ಸವದಿ, ಎಸ್.ಆರ್.ವಿಶ್ವನಾಥ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಕೃಷ್ಣೇ ಬೈರೇಗೌಡ, ಹ್ಯಾರಿಸ್, ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ,ಆರ್ ಶಂಕರ್, ಶಾಸಕ ಕುಮಟಳ್ಳಿ, ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಗಣ್ಯರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ದಾರೆ.
ಡಿಕೆಶಿ ಮಗಳ ಮದುವೆ ಫೆಬ್ರವರಿ 14 ರಂದು ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ನಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಕರಿಗೆ ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.