ನವದೆಹಲಿ: ಚಿನ್ನದ ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ. ಗಣನೀಯವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಈಗ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 4,664 ರೂ. ಆಗಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ದೆಹಲಿಯ ಜಿಎಸ್ಟಿ ಹೊರತದ ದರವನ್ನು ಪ್ರಕಟಿಸಿದ್ದು, 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 4,506 ರೂ., 18 ಕ್ಯಾರೆಟ್ ಚಿನ್ನದ ದರ 3,732 ರೂ. ಆಗಿದೆ.
Advertisement
#Gold and #Silver Closing #Rates for 17/02/2021#IBJA pic.twitter.com/Xb2Nptntsk
— IBJA (@IBJA1919) February 17, 2021
Advertisement
ಕೋವಿಡ್ ಸಮಯದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗಳಿಗೆ 56 ಸಾವಿರ ರೂ. ದಾಟಿ 57 ಸಾವಿರ ರೂ. ಸನಿಹಕ್ಕೆ ಹೋಗಿತ್ತು. ಅನಂತರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಈಗ 47 ಸಾವಿರ ರೂ.ಗಳ ಹತ್ತಿರಕ್ಕೆ ಬಂದಿದೆ. ಫೆಬ್ರವರಿ ಆರಂಭದಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.
Advertisement
#indicative #Retail selling #Rates for #Jewellery
To get these rates on your phone give a missed call on – 8955664433 pic.twitter.com/WMEOapBAdL
— IBJA (@IBJA1919) February 17, 2021
Advertisement
ಯಾಕೆ ಇಳಿಕೆ?
ಬಜೆಟ್ನಲ್ಲಿ ಬಂಗಾರದ ಆಮದು ಸುಂಕವನ್ನು ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಯುತ್ತಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಜನರು ಬಂಗಾರದ ಮೇಲೆ ಜಾಸ್ತಿ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಬೆಲೆ ಏರಿಕೆ ಆಗಿತ್ತು. ಈಗ ನಿಧನವಾಗಿ ಆರ್ಥಿಕ ಚಟುವಟಿಕೆ ಆರಂಭಗೊಂಡಿದ್ದು ಹೂಡಿಕೆದಾರರು ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.