ಕಲಬುರಗಿ: ಆನ್‍ಲೈನ್ ಮೂಲಕ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಲಬುರಗಿಯಲ್ಲಿ ಆಚರಿಸಲಾಯಿತು.
Advertisement
ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯ ಕಲಬುರಗಿ ವತಿಯಿಂದ 7ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆನ್ಲೈನ್ ತರಬೇತಿ ನೀಡುವ ಮೂಲಕ ಆಚರಿಸಲಾಯಿತು. ಯೋಗಪಟು ಸುದೀಪ್ ಬಿ.ಮಾಳಗಿ, ಹಿಂಗುಲಾಂಬಿಕಾ ಆಯುರ್ವೇದ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರವೀಣಕುಮಾರ ಚೌಧರಿ ಅವರು ವಿಶೇಷ ತರಬೇತಿ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಿರಿಜಾ ಎಸ್. ಯು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ ಇದ್ದರು.ಇದನ್ನೂ ಓದಿ: ದಟ್ಟ ಕಾಡಿನಲ್ಲಿರುವ ಜನರಿರುವಲ್ಲಿಗೆ ಹೋಗಿ ಲಸಿಕೆ ಹಾಕಿಸಿದ ಡಿಸಿ
Advertisement
Advertisement
ಝೂಮ್ ಆಪ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಆನ್‍ಲೈನ್ ಮೂಲಕ ಯುವ ವಿದ್ಯಾರ್ಥಿಗೆಗಳಿಗೆ ತರಬೇತಿ ನೀಡಲಾಯಿತು. ಜಿಲ್ಲೆಯ ಸುಮಾರು 200ಕ್ಕೂ ಅಧಿಕ ಯುವಜನತೆ, ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದರು. ಹಿಂಗುಲಾಬಿಕಾ ಆಯುರ್ವೇದಿಕ್ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಬಿ. ಕಣ್ಮಸೆ ಅವರು ಯೋಗದ ವಿವಿಧ ಭಂಗಿಗಳ ಬಗ್ಗೆ ತಿಳಿಸಿದಲ್ಲದೆ, ಅದರಿಂದಾಗುವ ಉಪಯೋಗದ ಬಗ್ಗೆ ವಿವರಿಸಿದರು.