ಬೆಂಗಳೂರು: ಆನ್ ಲೈನ್ ತರಗತಿ ಮತ್ತು ಶಾಲೆಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ಡಾ. ಶ್ರೀಧರ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ವರದಿಯನ್ನು ಸಲ್ಲಿಕೆ ಮಾಡಿದೆ.
ಮಕ್ಕಳ ದೈಹಿಕ ಮತ್ತು ಮಾನಸಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಯಾವ ತರಗತಿಯ ಮಕ್ಕಳಿಗೆ ಎಷ್ಟು ಸಮಯ ಆನ್ಲೈನ್ ಶಿಕ್ಷಣ ನೀಡಬೇಕು. ಕೊರೊನಾ ಕಾರಣದಿಂದ ಶಾಲೆಗಳ ಪ್ರಾರಂಭ ಯಾವ ರೀತಿ ಆಗಬೇಕು ಎಂಬ ಬಗ್ಗೆ ಸಮಿತಿ ಮಾರ್ಗಸೂಚಿಗಳನ್ನು ರಚಿಸಿ ವರದಿ ನೀಡಿದೆ. ಸಮಿತಿಯ ಶಿಫಾರಸುಗಳ ಅನ್ವಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.
Advertisement
Advertisement
ಆನ್ಲೈನ್ ಶಿಕ್ಷಣಕ್ಕೆ ಸಮಿತಿಯ ಶಿಫಾರಸ್ಸುಗಳು:
1) ಪೂರ್ವ ಪ್ರಾಥಮಿಕ ತರಗತಿ ಮತ್ತು 2 ನೇ ತರಗತಿವರೆಗೆ ಆನ್ಲೈನ್ ತರಗತಿ ವೇಳೆ ಪೋಷಕರ ಉಪಸ್ಥಿತಿ ಕಡ್ಡಾಯವಾಗಿ ಇರಬೇಕು.
2) ಆನ್ಲೈನ್ ತರಗತಿ ಗರಿಷ್ಠ ಪರದೆ ಸಮಯ 30 ನಿಮಿಷ ಮಾತ್ರ ಇರಬೇಕು.
3) 6ನೇ ತರಗತಿ ನಂತರ ಹೆಚ್ಚುವರಿ 15 ನಿಮಿಷ ನೀಡಬಹುದು.
4) 2 ನೇ ತರಗತಿಗೆ ಪರ್ಯಾಯ ದಿನಗಳು. 3 ನೇ ತರಗತಿ ನಂತರ ವಾರಕ್ಕೆ 5 ದಿನ ಆನ್ ಲೈನ್ ತರಗತಿ ನೀಡಬೇಕು. ಎರಡು ದಿನ ಆಫ್ ಲೈನ್ ತರಗತಿ ಕಡ್ಡಾಯವಾಗಿರಬೇಕು.
5) ಆನ್ಲೈನ್, ಆಫ್ಲೈನ್ ತರಗತಿಗೆ ಅವಕಾಶ ನೀಡಲಾಗಿದೆ.
Advertisement
6) ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಬಾರದು.
7) ಆನ್ಲೈನ್ ತರಗತಿಯನ್ನ ಅಗತ್ಯ ಸೈಬರ್ ಸುರಕ್ಷತೆ ಮತ್ತು ದುರುಪಯೋಗ ನಿಷೇಧಿಸುವ ಷರತ್ತಿನಲ್ಲಿ ಒದಗಿಬೇಕು.
8) ದೂರದರ್ಶನ, ರೇಡಿಯೋ ಮೂಲಕ ಬೋಧನಾ ವ್ಯವಸ್ಥೆ ಪ್ರಾರಂಭ ಮಾಡಬೇಕು.
Advertisement
ಶಾಲೆಗಳ ಪ್ರಾರಂಭಕ್ಕೆ ಸಮಿತಿ ಶಿಫಾರಸ್ಸು:
1) ಗ್ರಾಮೀಣ, ನಗರ ಪ್ರದೇಶ ಮತ್ತು ಜನದಟ್ಟಣೆಯ ಪ್ರದೇಶದಲ್ಲಿ ಕೆಂಪು, ಕಿತ್ತಳೆ, ಹಸಿರು ಭಾಗಗಳಾಗಿ ವಿಂಗಡಿಸಬೇಕು.
2) ಈ ಆಧಾರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ಶಾಲೆ ಪ್ರಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
3) ಶಾಲಾ ದಿನಗಳ ಸಂಖ್ಯೆ, ಸುರಕ್ಷತಾ, ನೈರ್ಮಲ್ಯ ಕಾರ್ಯ ವಿಧಾನ ಅನುಸರಿಸಬೇಕು. ಇದಕ್ಕೆ ಅಗತ್ಯ ಮಾರ್ಗಸೂಚಿ ಬಿಡುಗಡೆ ಮಾಡಬೇಕು.
4) ಶಾಲೆಗಳು ಪ್ರಾರಂಭ ಮಾಡುವ ಕೆಲಸ ಪ್ರಾಮಾಣಿಕವಾಗಿ ಇರಬೇಕು. ಮಗುವಿನ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ನವೀನ ಪರಿಹಾರಗಳನ್ನ ಹುಡುಕಬೇಕು.
5) ಮಾರ್ಗಸೂಚಿಗಳು ಉಲ್ಲಂಘನೆಯಾಗದಿರುವವರೆಗೂ ಶಾಲೆಗಳಿಗೆ ಶಿಕ್ಷಣ ಒದಗಿಸಲು ಅವಕಾಶ ನೀಡಬೇಕು. ಶಿಕ್ಷಣ ತಜ್ಞರು ಶಾಲೆಯಲ್ಲಿದ್ದು ಮಕ್ಕಳು, ಪೋಷಕರಿಗೆ ಅಗತ್ಯ ತಿಳುವಳಿಕೆ ನೀಡುವುದು.
6) ಶಾಲೆಗಳು ನೀಡುವ ಮಾರ್ಗಸೂಚಿ ಉಲ್ಲಂಘನೆ ಆದ್ರೆ ಪೋಷಕರು ದೂರು ನೀಡಬಹುದು.
7) ಕೊರೊನಾ ಸಂದರ್ಭ ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದಲ್ಲಿ ಪರಿಷ್ಕರಿಸಬೇಕು.
8) ಶಾಲೆಗಳು ಪರ್ಯಾಯ ಶೈಕ್ಷಣಿಕ ಪಠ್ಯ ಕ್ರಮ, ಕ್ಯಾಲೆಂಡರ್, ವೇಳಾಪಟ್ಟಿ ರಚನೆ ಮಾಡಿಕೊಳ್ಳಬೇಕು.
9) ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳುಲು ವರ್ಕ್ ಶೀಟ್, ಚಟುವಟಿಕೆ ಹಾಳೆ, ಹ್ಯಾಂಡ್ ಔಟ್ ಗಳನ್ನು ನೀಡಬೇಕು.
10) ತಂತ್ರಜ್ಞಾನ ವಿಧಾನ ಬಳಸಲು ಸಾಧ್ಯವಾಗದ ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು.
11) ವಿಶೇಷ ಅಗತ್ಯವಿರುವ ಮಕ್ಕಳಿಗೆ ವಿಶೇಷ ಕಾಳಜಿವಹಿಸಬೇಕು.