ಲಕ್ನೋ: ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಪಂಗನಾಮ ಹಾಕಿದ್ದು, ಬಾಕ್ಸ್ ನಲ್ಲಿದ್ದ ಮೊಬೈಲ್ ಕದ್ದು, ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ.
Advertisement
ಬಾಕ್ಸ್ ನಲ್ಲಿದ್ದ ಹೊಸ ಮೊಬೈಲ್ ಕದ್ದು, ಮೊಬೈಲ್ ಬದಲಿಗೆ ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ. ಇದೇ ರೀತಿ ಹಲವು ಗ್ರಾಹಕರಿಗೆ ಮೋಸ ಮಾಡಿದ್ದ ಗ್ಯಾಂಗ್ನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಮೇಜಾನ್, ಫ್ಲಿಪ್ಕಾರ್ಟ್ನಿಂದ ಬುಕ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಮೋಸ ಮಾಡಿದ್ದು, ಡೀಲರ್ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
Advertisement
ಆರೋಪಿಗಳನ್ನು ಶಿವಂ, ಕರಣ್, ವಿಜಯ್, ಅಶೋಕ್, ನಾಗೇಂದ್ರ ಹಾಗೂ ಶಿವಂ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಆರೋಪಿಗಳಿದ್ದ ಸ್ಥಳದಿಂದ 11 ಮೊಬೈಲ್ ಫೋನ್, ನಕಲಿ ಬಿಲ್ ಬುಕ್, ಪ್ಯಾಕಿಂಗ್ ಮಟಿರಿಯಲ್, ಟೇಪ್ ಕಟರ್ಸ್ ಹಾಗೂ ಸೋಪ್ ಬಾರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಗಾಜಿಯಾಬಾದ್ನ ವಸುಂಧರಾ ಕಾಲೋನಿಯ ಸೆಕ್ಟರ್ 15ರಲ್ಲಿ ಬಂಧಿಸಲಾಗಿದೆ ಎಂದು ಡಿಎಸ್ಪಿ ಅನ್ಶು ಜೈನ್ ಮಾಹಿತಿ ನೀಡಿದ್ದಾರೆ.
Advertisement
ಈ ಗ್ಯಾಂಗ್ ಹೊಸ ಮೊಬೈಲ್ಗಳಿದ್ದ ಬಾಕ್ಸ್ ನ್ನು ಕತ್ತರಿಸಿ, ಮೊಬೈಲ್ ತೆಗೆದುಕೊಂಡು, ಬಳಿಕ ಸೋಪ್ ಇಟ್ಟು ಗೊತ್ತಾಗದ ರೀತಿಯಲ್ಲಿ ನಾಜೂಕಾಗಿ ಪ್ಯಾಕ್ ಮಾಡುತ್ತಿದ್ದರು. ಅಲ್ಲದೆ ಡೆಲಿವರಿ ಬಾಯ್ಸ್ ಗ್ರಾಹಕರಿಗೆ ನಕಲಿ ಬಿಲ್ ನೀಡಿ ಯಾಮಾರಿಸುತ್ತಿದ್ದರು. ಗ್ರಾಹಕರ ಚಿತ್ತವನ್ನು ಬೇರೆಡೆ ಸೆಳೆಯಲು ಹೊಸ ಮೊಬೈಲ್ಗಳ ಮೇಲೆ ಡಿಸ್ಕೌಂಟ್ನ್ನು ಸಹ ಡೆಲಿವರಿ ಬಾಯ್ಸ್ ನೀಡುತ್ತಿದ್ದರು.