LatestMain PostNational

ಆಧಾರ್ ಕಾರ್ಡ್‌ನಲ್ಲಿ ಊಟದ ಮೆನು -ಫೋಟೋ ವೈರಲ್

Advertisements

ಕೋಲ್ಕತ್ತಾ: ನವ ಜೋಡಿ ತಮ್ಮ ಮದುವೆಯ ದಿನವನ್ನು ವಿನೂತನವಾಗಿಸುವ ಸಲುವಾಗಿ ಮದುವೆ ಊಟದ ಮೆನು ಕಾರ್ಡ್ ನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಮದುವೆಗೆ ಬಂದಂತಹ ಅತಿಥಿಗಳನ್ನು ಆಶ್ಚರ್ಯವಾಗಿಸುವಂತೆ ಮಾಡಿದ್ದಾರೆ.

ಕೋಲ್ಕತ್ತಾದ ನವ ಜೋಡಿ ಗೊಗೋಲ್ ಸಹಾ ಮತ್ತು ಸುವರ್ಣ ದಾಸ್ ತಮ್ಮ ಮದುವೆಯಲ್ಲಿ ಏನಾದರೂ ವಿಶೇಷತೆಯನ್ನು ಮಾಡಿ ಗಮನಸೆಳೆಯಬೇಕೆಂದು ನಿರ್ಧರಿಸಿ ಊಟದ ಮೆನುವನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಅತಿಥಿಗಳಿಗೆ ನೀಡಿದ್ದಾರೆ. ವಿಭಿನ್ನ ಮೆನುವನ್ನು ಮದುವೆಗೆ ಹೋದ ವ್ಯಕ್ತಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಈ ಹೊಸ ಬಗೆಯ ಮೆನು ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೂಗೋಲ್ ಸಹಾ, ಇದು ಸುವರ್ಣ ದಾಸ್ ಅವರ ಆಲೋಚನೆ. ನಾವಿಬ್ಬರೂ ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮಾದರಿಯ ಮೆನುವನ್ನು ಹಂಚಿದ್ದೇವೆ ಎಂದು ಸ್ಥಳೀಯ ವಾಹಿನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಮದುವೆಗೆ ಬಂದ ಕೆಲ ಅತಿಥಿಗಳು ಆಧಾರ್ ಕಾರ್ಡ್‍ನಂತಿರುವ ಮೆನುವನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದು, ಈ ಮದುವೆಗೆ ಆಧಾರ್ ಕಾರ್ಡ್ ಕಡ್ಡಾಯವೆಂದು ಬಾವಿಸಿದ್ದರಂತೆ.

Leave a Reply

Your email address will not be published.

Back to top button