– ವೀಡಿಯೋದಲ್ಲಿ ಅಂಕಿತಾ ಆರೋಪಿಸಿದ್ದೇನು..?
ನವದೆಹಲಿ: ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ಸೊಸೆ ಲಕ್ನೋ ಬಳಿಯ ಕಾಕೋರಿಯಲ್ಲಿರುವ ರಾಜಕಾರಣಿಗಳ ಮನೆಯ ಹೊರಗೆ ಆತ್ಮಹತ್ಯೆಗೆ ಯತ್ನಿಸುವ ಮೊದಲು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕೌಶಲ್ ಕಿಶೋರ್ ಮೋಹನ್ ಲಾಲ್ಗಂಜ್ ಸ್ಥಾನದಿಂದ ಲೋಕಸಭಾ ಸಂಸದರಾಗಿದ್ದಾರೆ. ವೀಡಿಯೋದಲ್ಲಿ ಅಂಕಿತಾ ತನ್ನ ಪತಿ ಆಯುಷ್, ಮಾವ ಕೌಶಲ್ ಕಿಶೋರ್, ಅತ್ತೆ ಜೈ ದೇವಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ನಾನು ಈ ನಿರ್ಧಾರ ತೆಗೆದುಕೊಳ್ಳಲು ಅವರೇ ನೇರ ಕಾರಣ ಎಂದು ತಿಳಿಸಿದ್ದಾರೆ.
Advertisement
Advertisement
ಆತ್ಮಹತ್ಯೆಗೆ ಯತ್ನಿಸಿದನ್ನು ಗಮನಿಸಿದ ಕೂಡಲೇ ಅಂಕಿತಾರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಕಿತಾ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Advertisement
ಲಕ್ನೋದಲ್ಲಿ ಬಿಜೆಪಿ ಸಂಸದರ ಮಗನ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಈ ವೀಡಿಯೋ ಬಂದಿದೆ. ಮೋಹನ್ಲಾಲ್ಗಂಜ್ ಕ್ಷೇತ್ರದ ಬಿಜೆಪಿ ಸಂಸದ ಪುತ್ರ ಆಯುಷ್ (30) ಗೆ ಮಡಿಯಾನ್ ಪ್ರದೇಶದಲ್ಲಿ ಗುಂಡು ಹಾರಿಸಲಾಗಿದೆ. ಪ್ರಥಮ ಚಿಕಿತ್ಸಾ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ಪೊಲೀಸರು, ಕೆಲ ವ್ಯಕ್ತಿಗಳ ಮೂಲಕ ಆತನ ಸೋದರ ಮಾವನೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಿದ್ದರು.
Advertisement
बीजेपी सांसद कौशल किशोर की बहू ने की खुदकुशी की कोशिश, परिवार के सामने काट ली हाथ की नस
पूरा मामला यहां पढ़िए: https://t.co/DZ8U9wWUvg#KaushalKishore pic.twitter.com/BYLaGhYKkB
— humsamvet (@humsamvet) March 15, 2021