ಮಡಿಕೇರಿ: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಅವರು ಸಾಯುವಾಗ ತನ್ನ ಕುಟುಂಬದ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಪೋನ್ನಂಪೇಟೆಯಲ್ಲಿ ಮಾತಾನಾಡಿದ ಅವರು ರೈತರ ಆತ್ಮಹತ್ಯೆಗೆ ನೀರಾವರಿ ಕಾರಣವಲ್ಲ, ಮಂಡ್ಯದಲ್ಲಿ ನೀರಾವರಿ ಸೌಲಭ್ಯವಿದ್ದರೂ ಅತೀ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ನೀರಾವರಿ ಸೌಲಭ್ಯವಿಲ್ಲದ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣ ಕಡಿಮೆ ಇದೆ ಎಂದರು.
Advertisement
Advertisement
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳು ಮಾಡುವ ಕೆಲಸ. ಯಾರು ಆತ್ಮಹತ್ಯೆಗೆ ಶರಣಾಗಬಾರದು. ಸಾವಯವ ಗೊಬ್ಬರ ಬಳಸಿ, ಸಮಗ್ರ ಕೃಷಿ ಪದ್ಧತಿಯಡಿ ಕೆಲಸ ಮಾಡಿದರೆ ಉತ್ತಮ ಲಾಭ ಸಾಧ್ಯ. ಇಸ್ರೇಲ್ ಮಾದರಿಯಲ್ಲ ಕೋಲಾರ ಮಾದರಿಯಲ್ಲಿ ಕೃಷಿ ಮಾಡುವುದನ್ನು ರಾಜ್ಯಕ್ಕೆ ಹೇಳಿ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.