– ಅಕ್ಷತ್ ಪ್ರೇಯಸಿ ಸುತ್ತ ಅನುಮಾನದ ಹುತ್ತ
ಮುಂಬೈ: ಉದಯೋನ್ಮುಖ ನಟ ಅಕ್ಷತ್ ಉತ್ಕರ್ಷ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34ರ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಅಕ್ಷತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಎಂಬುದನ್ನ ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಡೀ ಪ್ರಕರಣ ಅಕ್ಷತ್ ಗೆಳತಿ ಸ್ನೇಹಾ ಚೌಹಾಣ್ ಅತ್ತ ಬೆರಳು ಮಾಡುತ್ತಿದೆ.
Advertisement
ಸ್ನೇಹಾ ಚೌಹಾಣ್ ಸಹ ನಟಿಯಾಗಿದ್ದು, ಅಕ್ಷತ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಅಕ್ಷತ್ ನಿಧನವಾದ ದಿನ ಅಂದ್ರೆ ಸೆಪ್ಟೆಂಬರ್ 27ರ ರಾತ್ರಿ ಸ್ನೇಹಾ ಚೌಹಾಣ್ ಮನೆಯಲ್ಲಿದ್ದಿದ್ದು, ಅವರೇ ಪೊಲೀಸರು ಮತ್ತು ಕುಟುಂಬಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅಕ್ಷತ್ ಜೊತೆಯಲ್ಲಿದಿದ್ದನ್ನು ಸ್ನೇಹಾ ಸಹ ಒಪ್ಪಿಕೊಂಡಿದ್ದಾರೆ. ಭಾನುವಾರ ಜೊತೆಯಲ್ಲಿ ಊಟ ಮಾಡುತ್ತಿರುವಾಗ ಅಕ್ಷತ್ ಒಂದು ರೀತಿ ವರ್ತಿಸುತ್ತಿದ್ದನು. ರಾತ್ರಿ ಸುಮಾರು 11.30ಕ್ಕೆ ಅಕ್ಷಯ್ ಶವ ಹಾಲ್ ನಲ್ಲಿ ನೇತಾಡುತ್ತಿತ್ತು. ಕೂಡಲೇ 100 ನಂಬರ್ ಗೆ ಕರೆ ಮಾಡಿದೆ. ಸ್ಥಳಕ್ಕಾಗಮಿಸಿದ ಅಂಬೋಲೆ ಪೊಲೀಸರ ಸಹಾಯದಿಂದ ಅಕ್ಷತ್ ನನ್ನು ಆಸ್ಪತ್ರೆಗೆ ಕರೆದೊಯ್ದದಾಗ ವೈದ್ಯರು ಮೃತಪಟ್ಟಿರೋದನ್ನ ಖಚಿತ ಪಡಿಸಿದರು ಎಂದು ಸ್ನೇಹಾ ಚೌಹಾಣ್ ಹೇಳಿದ್ದಾರೆ.
Advertisement
Advertisement
ಬಿಹಾರದ ಮುಜಫರ್ ನಗರ ಮೂಲದ ಎಂಬಿಎ ಪದವಿಧರ ಅಕ್ಷತ್ ಮುಂಬೈನಲ್ಲಿ ಉಳಿದುಕೊಂಡಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್ ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು.
Advertisement
ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾನೆ. ಅದಾದ ಬಳಿಕ ಅಕ್ಷತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದು ತಡರಾತ್ರಿ ಅಕ್ಷತ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮುಂಬೈ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಕ್ಷತ್ ಮಾವ ರಂಜಿತ್ ಸಿಂಗ್ ಹೇಳಿದ್ದಾರೆ.
ಅಕ್ಷತ್ ಸಾವು ಆಗಿದೆಯಾ ಅಥವಾ ಇಲ್ಲವಾ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ ಮುಂಬೈಗೆ ದೌಡಾಯಿಸಿದೆ. ಅಕ್ಷತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ರೆ, ಆತನ ಗೆಳೆಯರು ಅಕ್ಷತ್ ತಂದೆಗೆ ಫೋನ್ ಮಗ ಸಾವು ಆಗಿದೆ ಅಂತಾ ಹೇಳಿದ್ದರು. ಕೊನೆಗೆ ಮುಂಬೈಗೆ ಬಂದಾಗ ಅಕ್ಷತ್ ನಮ್ಮನ್ನು ಅಗಲಿರುವ ವಿಷಯ ತಿಳಿಯಿತು ಎಂದು ರಂಜಿತ್ ಸಿಂಗ್ ಹೇಳಿದ್ದರು.
ಒಂದಿಷ್ಟು ಅನುಮಾನ: ಅಕ್ಷತ್ ಪ್ಲಾಸ್ಟಿಕ್ ಚೀಲ ಬಳಸಿ ನೇಣುಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಆರು ಅಡಿ ಎತ್ತರದ ಮಗನ ಭಾರವನ್ನ ಒಂದು ಸಣ್ಣ ಚೀಲ ಹಿಡಿಯಲು ಸಾಧ್ಯವೇ ಎಂದು ಅಕ್ಷತ್ ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಅಕ್ಷತ್ ಪೋಷಕರು ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಸಹ ಆರೋಪಿಸಿದ್ದರು.
ಸುಶಾಂತ್ ಸಿಂಗ್ ರಜಪೂತ್ ಸಾವು: ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಅವರ ಬಾಂದ್ರಾದ ನಿವಾಸದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ನಟಿ ಕಂಗನಾ ರಣಾವತ್ ಮತ್ತು ಸುಶಾಂತ್ ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ, ಸಿಬಿಐ ತನಿಖೆ ನಡೆಯಬೇಕೆಂದು ಅಭಿಯಾನ ಆರಂಭಿಸಿದ್ದರು. ಬಿಹಾರ ಮತ್ತು ಮುಂಬೈ ಪೊಲೀಸರ ಹಗ್ಗ ಜಗ್ಗಾಟದಲ್ಲಿ ಸುಶಾಂತ್ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದೆ.