– ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ
ಬಾಗ್ಧಾದ್: ಆತ್ಮಹತ್ಯಾ ಬಾಂಬ್ ದಾಳಿಯಿಂದಾಗಿ 30 ಮಂದಿ ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿರುವ ಘಟನೆ ಇರಾಕ್ ರಾಜಧಾನಿಯಾದ ಬಾಗ್ಧಾದ್ನಲ್ಲಿ ನಡೆದಿದೆ.
ತಯರಾನ್ ಸ್ವೇರ್ನಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಧರಿಸಿದ್ದ ವ್ಯಕ್ತಿ ಜನರ ಮಧ್ಯಕ್ಕೆ ನುಗ್ಗಿ ತನ್ನನ್ನು ತಾನೂ ಸ್ಫೋಟಿಸಿಕೊಂಡಿದ್ದಾನೆ. ಕಿಕ್ಕಿರಿದ ಜನಸಂದಣಿ ಇರುವ ಪ್ರದೇಶಕ್ಕೆ ಬಂದು ಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಇದರಿಂದಾಗಿ ಹಲವು ಸಾವು ನೋವುಗಳು ಸಂಭವಿಸಿದೆ.
Advertisement
Advertisement
ಬಾಂಬ್ ಸ್ಫೋಟಗೊಂಡ ವೇಳೆ ಹತ್ತಿರದಲ್ಲಿದ್ದವರು ಹಲವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಅಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಮೂರು ವರ್ಷಗಳ ಅವಧಿಯಲ್ಲಿ ನಡೆದ ಅತ್ಯಂತ ಭೀಕರ ಬಾಂಬ್ ದಾಳಿ ಇದಾಗಿದೆ. ಈ ಅವಘಡದಲ್ಲಿ ಮಾರುಕಟ್ಟೆಯಲ್ಲಿದ್ದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾವನ್ನಪ್ಪಿದ್ದಾರೆ. ಈ ದುರಂತದ ಕುರಿತಾಗಿ ಹೆಚ್ಚಿನ ತನಿಖೆಯಿಂದ ಮಾಹಿತಿ ತಿಳಿದು ಬರಬೇಕಿದೆ.