ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಏಷ್ಯಾಕಪ್-2020 ರದ್ದಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಇಡೀ ವಿಶ್ವವನ್ನು ಮಾರಿಯಂತೆ ಕಾಡುತ್ತಿರುವ ಕಾರಣ ಕ್ರಿಕೆಟ್ ಪಂದ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಸುಮಾರು 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಯನ್ನು ನಿಲ್ಲಿಸಿತ್ತು. ಆದರೆ ಇಂದು ಕೊರೊನಾ ವೈರಸ್ ನಡುವೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮಧ್ಯೆ ಖಾಲಿ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆದಿದೆ. ಇದರ ಮಧ್ಯೆ 2020 ಏಷ್ಯಾಕಪ್ ಅನ್ನು ರದ್ದು ಮಾಡಲಾಗಿದೆ ಎಂದು ಗಂಗೂಲಿಯವರು ಹೇಳಿದ್ದಾರೆ.
Advertisement
Kemar Roach is all set to bowl the first ball in international cricket for 117 days!
Are. You. Ready?#ENGvWI pic.twitter.com/Ha3iksAOZ4
— ICC (@ICC) July 8, 2020
Advertisement
ಏಷ್ಯಾಕಪ್ ನಡೆಸುವ ವಿಚಾರವಾಗಿ ಜುಲೈ 09ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆ ನಡೆಸಲಿದೆ. ಆದರೆ ಅದಕ್ಕೆ ಒಂದು ದಿನ ಮುಂಚೆಯೇ ಗಂಗೂಲಿಯವರು ಏಷ್ಯಾಕಪ್ ರದ್ದಾಗಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇಂದು ವಿಕ್ರಾಂತ್ ಗುಪ್ತಾ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಚಾಟ್ ಮಾಡುವಾಗಿ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿರುವ ಗಂಗೂಲಿ ಕೊರೊನಾ ವೈರಸ್ ಕಾರಣದಿಂದ ಈ ವರ್ಷದ ಏಷ್ಯಾಕಪ್ ರದ್ದಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಜೊತೆಗೆ ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ಭಾರತ ತಂಡವು ಯಾವಾಗ ಕ್ರಿಕೆಟ್ ಚಟುವಟಿಕೆಗಳಿಗೆ ಮರಳಲಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ದೊರಕಿಲ್ಲ ಎಂದು ಹೇಳಿದ್ದಾರೆ. ಕೊರೊನಾ ರೋಗದ ತೀವ್ರತೆ ನೋಡಿಕೊಂಡು ಮತ್ತೆ ಪಂದ್ಯಗಳನ್ನು ಆಯೋಜಿಸುವುದಾಗಿ ಗಂಗೂಲಿ ತಿಳಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿತ್ತು.
ಕೊರೊನಾ ವೈರಸ್ ಬಿಕ್ಕಟ್ಟಿನ ನಂತರ ಭಾರತ ಯಾವಾಗ ಮೊದಲ ಅಂತಾರಾಷ್ಟ್ರೀಯ ಸರಣಿಯನ್ನು ಆಡಲಿದೆ ಎಂದು ಹೇಳಲು ನನಗೆ ಕಷ್ಟವಾಗುತ್ತದೆ. ನಾವು ಈಗಾಗಲೇ ಅದರ ಬಗ್ಗೆ ಸಭೆ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಿದ್ದೇವೆ. ಆದರೆ ಸರ್ಕಾರದ ನಿಮಯಗಳನ್ನು ಮೀರಲು ಆಗುವುದಿಲ್ಲ. ನಮಗೆ ಅವಸರವಿಲ್ಲ ಏಕೆಂದರೆ ನಮಗೆ ಆಟಗಾರರ ಆರೋಗ್ಯ ಮುಖ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್ ಮಹಾಮಾರಿಯಿಂದ ಐಪಿಎಲ್ ಸೇರಿದಂತೆ ಪ್ರಮುಖ ಕ್ರಿಕೆಟ್ ಟೂರ್ನಿಗಳು ಮುಂದಕ್ಕೆ ಹೋಗಿವೆ. ಈ ವರ್ಷದ ಕೊನೆಯಲ್ಲಿ ಐಪಿಎಲ್ ಅನ್ನು ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಶ್ರೀಲಂಕಾ, ಯುಎಇ, ನ್ಯೂಜಿಲೆಂಡ್ ದೇಶಗಳು ಐಪಿಎಲ್ ಅತಿಥ್ಯ ವಹಿಸಲು ಆಸಕ್ತಿ ವ್ಯಕ್ತಪಡಿಸಿವೆ. ಆದರೆ ಹೊರದೇಶದಲ್ಲಿ ಆಯೋಜಿಸುವ ಮೊದಲು ಭಾರತದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಹಿಡಿತಕ್ಕೆ ಬರಲಿ ಎಂದು ಬಿಸಿಸಿಐ ಕಾಯುತ್ತಿದೆ.