ಬೆಂಗಳೂರು: ರಾಜಕೀಯ ಬದಲಾವಣೆಗಳು ಸದ್ಯದಲ್ಲೇ ನಡೆಯುತ್ತವೆ. ಅಗಸ್ಟ್ 15 ರ ನಂತರ ರಾಜಕೀಯ ಬದಲಾವಣೆಗಳು ಗೋಚರಿಸುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನ ಸಿಎಂ ಆಗಿ ಮುಂದುವರಿಸುವುದು ಬಿಜೆಪಿ ಆಂತರಿಕ ವಿಚಾರ. ನಾನು ಆ ಬಗ್ಗೆ ಕಮೆಂಟ್ ಮಾಡಲ್ಲ. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ 17 ಜನ ಮಿತ್ರಮಂಡಳಿ ಶಾಸಕರೇ ಪ್ರತಿಕ್ರಿಯೆ ನೀಡಿದ್ದಾರೆ. ಈಗ 17 ಶಾಸಕರಿಗೆ ಪಶ್ಚಾತ್ತಾಪ ಕಾಡ್ತಿದೆ. ಕೊರೊನಾ ಗೆ ತುತ್ತಾಗಿ ಸಾವಿರಾರು ಜನ ಸತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಯ ನಾಟಕ ಮಾಡ್ತಿದಾರೆ. ನಾಯಕತ್ವ ಬದಲಾವಣೆ ಬಿಜೆಪಿಯ ನಾಟಕ. ಅರುಣ್ ಸಿಂಗ್ ಬಂದು ಸಭೆ ನಡೆಸ್ತಿದಾರೆ. ಇವರಿಗೆ ಮಾನವೀಯತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲೂ ‘ಮೋದಿ, ಮೋದಿ’ ಎಂದರೆ ಬಡವರ ಬದುಕು ಬೂದಿಯಾಗೋದು ಖಚಿತ: ಸಿದ್ದರಾಮಯ್ಯ
Advertisement
Advertisement
ಕೊರೊನಾದಿಂದಾಗಿ ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಬ್ಲಾಕ್ ಫಂಗಸ್ಗೆ ಇನ್ನ ಸರಿಯಾದ ಔಷಧಿ ಸಿಕ್ಕಿಲ್ಲ. ದುಡಿಮೆ ಇಲ್ಲದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡಿಯುತ್ತಿದೆ. ಬಿಜೆಪಿಯವರಿಗೆ ನಾಚಿಕೆ ಆಗಬೇಕು ಜನರ ಕಷ್ಟಕ್ಕೆ ಸ್ಪಂದಿಸುವ ಸಮಯದಲ್ಲಿ ನಾಯಕತ್ವ ಬದಲಾವಣೆ ನಾಟಕ ಮಾಡ್ಕೊಂಡು ಕೂತಿದ್ದಾರೆ. ಇವರಿಗೆ ಸ್ವಲ್ಪ ಮಾನವೀಯತೆ ಇಲ್ಲ. ತಮ್ಮ ಆಡಳಿತ ವೈಫಲ್ಯ ಮರೆಮಾಚಲು ನಾಯಕತ್ವ ಬದಲಾವಣೆ ನಾಟಕ ಮಾಡ್ತಿದ್ದಾರೆ. ಬಿಜೆಪಿ ಅವರದು ಲಜ್ಜೆ ಗೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್
Advertisement