ನವದೆಹಲಿ: ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇರ್ ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿ ಟೋಲ್ಗಳಲ್ಲಿ ಶುಲ್ಕ ವಿನಾಯಿತಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ.
Toll Fee for Tankers Carrying Liquid Medical Oxygen exempted on National Highways.
Click here for more details: https://t.co/GmiogH1l8D
— NHAI (@NHAI_Official) May 8, 2021
Advertisement
ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ಸ್ ಹಾಗೂ ಕಂಟೇನರ್ಗಳನ್ನು ಅಂಬುಲೆನ್ಸ್ ಸೇರಿದಂತೆ ಇತರೆ ತುರ್ತು ವಾಹನಗಳಂತೆ ಪರಿಗಣಿಸಬೇಕು. ಇನ್ನು ಎರಡು ತಿಂಗಳುಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಟೋಲ್ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
Containers carrying Liquid Medical Oxygen will be treated at par with other emergency vehicles such as ambulances for a period of two months or till further orders. Priority passage is being provided to such vehicles for quick and seamless transportation of medical oxygen.
— NHAI (@NHAI_Official) May 8, 2021
Advertisement
ಕೊರೊನಾ ಮಹಾಮಾರಿ ತಾಂಡವಾಡುತ್ತಿರುವ ಹಿನ್ನೆಲೆ ದೇಶಾದ್ಯಂತ ಆಕ್ಸಿಜನ್ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಈ ವಾಹನಗಳಿಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
Advertisement
ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇನರ್ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಮಾರ್ಗವನ್ನು ಒದಗಿಸಲಾಗಿದೆ. ಆಕ್ಸಿಜನ್ ಟ್ಯಾಂಕರ್ಗಳು ಟೋಲ್ ಹಣ ನೀಡದೆ ಉಚಿತವಾಗಿ ಸಂಚರಿಸಬಹುದಾಗಿದೆ. ಅಲ್ಲದೆ ಹೆದ್ದಾರಿ ಸಿಬ್ಬಂದಿ ಸೇರಿ ಎಲ್ಲ ರೀತಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹ ಮೆಡಿಕಲ್ ಆಕ್ಸಿಜನ್ ವಾಹನಗಳ ಸಂಚಾರಕ್ಕೆ ತಡೆಯಾಗದಂತೆ ದಾರಿ ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.