ನವದೆಹಲಿ: ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸಿವುದು ಕಡ್ಡಾಯ. ಅಲ್ಲದೇ ಪರೀಕ್ಷೆ ವೇಳೆ ಅಭ್ಯರ್ಥಿಗಳು ತಾವೇ ಸ್ವತಃ ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್ ತರಬೇಕು ಎಂದು ಯಪಿಎಸ್ಸಿ ತಿಳಿಸಿದೆ.
ಕೊರೊನಾ ಸಂಕಷ್ಟದಲ್ಲೇ ಅಕ್ಟೋಬರ್ 4 ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಯುಪಿಎಸ್ಸಿ ದಿನಾಂಕ ನಿಗದಿ ಮಾಡಿದ್ದು, ಇದಕ್ಕಾಗಿ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Advertisement
Advertisement
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಇಲ್ಲದೇ ಪರೀಕ್ಷೆ ಕೊಠಡಿಗಳಿಗೆ ಅನುಮತಿಸುವುದಿಲ್ಲ. ಇದರ ಜೊತೆಗೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದೆ. ಈಗಾಗಲೇ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದ್ದು, ಗುರುತಿನ ಚೀಟಿಯೊಂದಿಗೆ ಬೆಳಗ್ಗೆ 9:20ರ ವೇಳೆಗೆ ಪರೀಕ್ಷೆ ಕೊಠಡಿಗಳು ಪ್ರವೇಶಿಸಬೇಕು. ಕಪ್ಪು ಬಾಲ್ ಬಳಕೆಗೆ ಮಾತ್ರ ಅವಕಾಶ ಎಂದು ತಿಳಿಸಲಾಗಿದೆ.
Advertisement
Advertisement
ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತಿತರ ಹುದ್ದೆಗಳ ಆಯ್ಕೆಗಾಗಿ ವಾರ್ಷಿಕವಾಗಿ ಮೂರು ಹಂತಗಳಲ್ಲಿ ಅಂದರೆ ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ.
ಈ ವರ್ಷ ಮೇ 31 ರಂದು ನಾಗರಿಕ ಸೇವಾ ಪೂರ್ವ ಭಾವಿ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಅಕ್ಟೋಬರ್ 4ಕ್ಕೆ ಮುಂದೂಡಲಾಗಿತ್ತು.