-ಕೊಂದು ಪಕ್ಕದ್ಮನೆಯಲ್ಲಿ ಶವ ನೇತಾಕಿದ್ರು
-ಅತ್ತೆ ಮೇಲಿನ ವ್ಯಾಮೋಹಕ್ಕೆ ತನ್ನೂರು ತೊರೆದಿದ್ದ ಅಳಿಯ
-ಸುಳ್ಳು ಕಥೆ ಹೇಳಿದ ಅಪ್ರಾಪ್ತ ಮಗ
ಪಾಟ್ನಾ/ವೈಶಾಲಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಅಳಿಯನ ಜೊತೆ ಸೇರಿ ಮಹಿಳೆ ಕೊಲೆ ಮಾಡಿರುವ ಘಟನೆ ವೈಶಾಲಿ ಜಿಲ್ಲೆಯ ದೇಸ್ರಿ ಠಾಣಾ ವ್ಯಾಪ್ತಿಯ ಮುರೌವತಪುರನಲ್ಲಿ ನಡೆದಿದೆ.
Advertisement
50 ವರ್ಷದ ತಿಲಕ್ ರಾಯ್ ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಅಳಿಯ ಮೋಹನ್ ರಾಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಳಿಯ ಮೋಹನ್ ನಿಂದ ದೂರವಿರುವಂತೆ ತಿಲಕ್ ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದನು. ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಂದಿದ್ದಾರೆ. ತಮ್ಮ ಮೇಲೆ ಅನುಮಾನ ಬರದಿರಲಿ ಅಂತ ಪಕ್ಕದಲ್ಲಿಯ ನಿರ್ಮಾಣ ಹಂತಹ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Advertisement
Advertisement
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆ ಸವಿತಾಳ ಅಪ್ರಾಪ್ತ ಮಗ, ತಂದೆ ಪ್ರತಿದಿನ ಕುಡಿದು ಬಂದು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು. ನಿನ್ನೆ ರಾತ್ರಿಯೂ ಪಾನಮತ್ತನಾಗಿ ಬಂದ ತಂದೆ ನಮ್ಮ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹೋಗಿದ್ದರು. ಈ ವೇಳೆ ನೇಣು ಹಾಕಿಕೊಂಡಿರಬಹುದು ಎಂದು ಹೇಳಿದ್ದನು. ಇದನ್ನೂ ಓದಿ: ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ
Advertisement
ಶವದ ಮೇಲೆ ಗಾಯದ ಗುರುತುಗಳು ಕಂಡು ಅನುಮಾನಗೊಂಡ ತಿಲಕ್ ಸೋದರ ಪೊಲೀಸ್ ಠಾಣೆಗೆ ತೆರಳಿ ಅತ್ತಿಗೆ, ಅಳಿಯ ಮೋಹನ್ ಮತ್ತು ಮಗನ ವಿರುದ್ಧ ದೂರು ದಾಖಲಿಸಿದ್ದರು. ಅನುಮಾನದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್
ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರೋದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಇದನ್ನೂ ಓದಿ: ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ