ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅರ್ಧಶತಕ ಹೊಡೆಯುವ ಮೂಲಕ 2 ದಾಖಲೆ ನಿರ್ಮಿಸಿದ್ದಾರೆ.
ಆಡಿದ ಮೊದಲ ಐಪಿಎಲ್ ಆವೃತ್ತಿಯಲ್ಲಿ5 ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೇ ಆಡಿದ ಮೊದಲ ಸರಣಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
Advertisement
Advertisement
ಈ ಮೊದಲು ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ 4 ಅರ್ಧಶತಕ ಸಿಡಿಸಿದ್ದರು. 2014 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಮೊದಲ ಆವೃತ್ತಿಯಲ್ಲೇ 14 ಪಂದ್ಯಗಳಿಂದ 33.8ರ ಸರಾಸರಿಯಲ್ಲಿ 439 ರನ್ ಹೊಡೆದಿದ್ದರು. ಈಗ ಪಡಿಕ್ಕಲ್ 14 ಪಂದ್ಯಗಳಿಂದ 472 ರನ್ ಹೊಡೆದಿದ್ದಾರೆ.
Advertisement
ವಿದೇಶಿ ಆಟಗಾರರನ್ನು ಸೇರಿಸಿಕೊಂಡರೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರು ತಾವಾಡಿದ ಮೊದಲ ಆವೃತ್ತಿಯಲ್ಲೇ ಬರೋಬ್ಬರಿ 600 ರನ್ ಸಿಡಿಸಿದ್ದರು.
Advertisement
ಇಂದಿನ ಪಂದ್ಯದಲ್ಲಿ ಪಡಿಕ್ಕಲ್ 50 ರನ್(41 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಈ ಸರಣಿಯಲ್ಲಿ 33.71 ಸರಾಸರಿಯಲ್ಲಿ 472 ರನ್ ಹೊಡೆದಿರುವ ಪಡಿಕ್ಕಲ್ ವೈಯಕ್ತಿಕ ಗರಿಷ್ಟ 74 ರನ್ ಬಾರಿಸಿದ್ದಾರೆ. ಒಟ್ಟು 373 ಬಾಲ್ ಎದುರಿಸಿರುವ ಪಡಿಕ್ಕಲ್ 126.54 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 51 ಬೌಂಡರಿ, 8 ಸಿಕ್ಸರ್ ಹೊಡೆದಿದ್ದಾರೆ.
ಈ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದರೆ ಶಿಖರ್ ಧವನ್ ಮತ್ತು ಪಡಿಕ್ಕಲ್ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ 670 ರನ್ ಹೊಡೆದಿದ್ದರೆ, ಶಿಖರ್ ಧವನ್ 525 ರನ್ ಹೊಡೆದಿದ್ದಾರೆ.