ಲಂಡನ್: ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಎದುರಿಸುವುದು ಕಷ್ಟ ಎಂದು ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಹೆಚ್ಚಿನ ಸಮಯವನ್ನು ಇಂಗ್ಲೆಂಡ್‍ನಲ್ಲಿ ಕಳೆಯುತ್ತಾರೆ. ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ತರಬೇತಿ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಜೊತೆಯೂ ಅರ್ಜುನ್ ಹಲವು ಬಾರಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.
Advertisement
Advertisement
ತರಬೇತಿ ವೇಳೆ ಇಂಗ್ಲೆಂಡ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್‍ರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಸದ್ಯ ಅರ್ಜನ್ ಬೌಲಿಂಗ್ ಕುರಿತು ಡೇನಿಯಲ್ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದು, ಅರ್ಜುನ್ ನಾನು ಉತ್ತಮ ಸ್ನೇಹಿತರು. ಲಾಡ್ರ್ಸ್ ಕ್ರೀಡಾಂಗಣದಲ್ಲಿ ತರಬೇತಿ ಪಡೆಯಲು ಅರ್ಜುನ್ ಬರುತ್ತಿದ್ದರು. ಆಗ ಅರ್ಜುನ್ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದರೆ ಎದುರಿಸಲು ಭಯವಾಗುತ್ತಿತ್ತು. ನಾನು ಎಸೆಯುವ ಬೌನ್ಸರ್ ಗಳು ನಿಮ್ಮ ತಲೆಗೆ ಬಡಿಯುತ್ತವೆ ಎಂದು ಅರ್ಜುನ್ ಹೇಳುತ್ತಿದ್ದರು. ಅವರ ವೇಗದ ಬೌಲಿಂಗ್ ಎದುರಿಸಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟ ಎಂದು ಡೇನಿಯಲ್ ಹೇಳಿದ್ದಾರೆ.
Advertisement
Advertisement
ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ನೋಡುವ ಅವಕಾಶವಿದೆ. ಅಲ್ಲದೇ ನನಗೆ ಅರ್ಜುನ್ ಅವರ ತಾಯಿ ಅಂಜಲಿರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಸಚಿನ್ ದಂಪತಿ ಇಂಗ್ಲೆಂಡ್ ಬಂದರೆ ತಪ್ಪದೇ ಭೇಟಿ ಮಾಡುತ್ತೇನೆ ಎಂದು ಡೇನಿಯಲ್ ವ್ಯಾಟ್ ತಿಳಿಸಿದ್ದಾರೆ. 2017ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಇದುವರೆಗೂ 74 ಏಕದಿನ, 109 ಟಿ20 ಪಂದ್ಯಗಳನ್ನು ಡೇನಿಯಲ್ ವ್ಯಾಟ್ ಆಡಿದ್ದಾರೆ.
View this post on Instagram