ಅಯೋಧ್ಯೆ: ಇಂದು ರಾಮಜನ್ಮ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದರೆ ರಾವಣ ದೇವಾಲಯದಲ್ಲೂ ಸಂಭ್ರಮ ಮನೆ ಮಾಡಿದೆ.
ಅಯೋಧ್ಯೆಯಿಂದ 650 ಕಿ.ಮೀ, ಗ್ರೇಟರ್ ನೋಯ್ಡಾದಿಂದ 10 ಕಿ.ಮೀ ದೂರದಲ್ಲಿರುವ ಗೌತಮ ಬುದ್ಧ ನಗರದ ಬಿಸ್ರಾಕ್ ಎಂಬಲ್ಲಿ ರಾವಣ ದೇವಾಲಯವಿದೆ. ಈ ದೇವಾಲಯದ ಅರ್ಚಕ ಮಹಾಂತ ರಾಮದಾಸ್ ಅವರು ಭೂಮಿ ಪೂಜೆ ನಡೆದ ಬಳಿಕ ಸಹಿ ಹಂಚಿ ಸಂಭ್ರಮಿಸುವುದಾಗಿ ಹೇಳಿದ್ದಾರೆ.
Advertisement
Advertisement
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವು, ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯುತ್ತಿರುವುದು ಸಂಭ್ರಮ ತಂದಿದೆ. ನಾನು ಲಾಡು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸುತ್ತೇನೆ. ಈ ಜಾಗದಲ್ಲಿ ದೊಡ್ಡ ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
Advertisement
ಒಂದು ವೇಳೆ ರಾವಣ ಇಲ್ಲದೇ ಇದ್ದರೆ ರಾಮನ ಶಕ್ತಿ ಪ್ರಪಂಚಕ್ಕೆ ತಿಳಿಯುತ್ತಿರಲಿಲ್ಲ. ಒಂದು ವೇಳೆ ರಾಮ ಇಲ್ಲದೇ ಇದ್ದರೆ ರಾವಣ ಯಾರೂ ಎನ್ನುವುದು ಗೊತ್ತಾಗುತ್ತಿರಲಿಲ್ಲ ಎಂದು ತಿಳಿಸಿದರು.
Advertisement
ರಾವಣ ಬಹಳ ಜ್ಞಾನವಂತ ವ್ಯಕ್ತಿ. ಸೀತೆಯನ್ನು ಅಪಹರಣ ಮಾಡಿದ ಬಳಿಕ ಆತ ನೇರವಾಗಿ ಅರಮನೆಗೆ ಕರೆದುಕೊಂಡು ಹೋಗಲಿಲ್ಲ. ಅಶೋಕವನದಲ್ಲಿ ಇಟ್ಟು ಆಕೆಯ ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿದ್ದ. ರಾಮನನ್ನು ನಾವು ಮರ್ಯಾದಾ ಪುರೋಷೋತ್ತಮ ಎಂದು ಕರೆಯುತ್ತೇವೆ. ಅದೇ ರೀತಿಯಾಗಿ ರಾವಣನೂ ಸೀತೆಗೆ ಹಿಂಸೆ ನೀಡದೇ ಘನತೆಯನ್ನು ಎತ್ತಿ ಹಿಡಿದಿದ್ದ ಎಂದು ಹೇಳುತ್ತಾರೆ.
ಬಿಸ್ರಾಕ್ ರಾವಣನ ಜನ್ಮ ಸ್ಥಳವೆಂದು ಕಥೆಗಳು ಹೇಳುತ್ತವೆ. ಹೀಗಾಗಿ ಈ ಗ್ರಾಮದಲ್ಲಿ ರಾವಣನ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿ ರಾವಣ ಅಲ್ಲದೇ ಶಿವ, ಪಾರ್ವತಿ, ಕುಬೇರನ ದೇವಾಲಯವಿದೆ. ದೇವಾಲಯಕ್ಕೆ ಬರುವ ಶೇ.20 ರಷ್ಟು ಮಂದಿ ರಾವಣನನ್ನು ಪೂಜಿಸುತ್ತಾರೆ ಎಂದು ಮಹಾಂತ ರಾಮದಾಸ್ ಹೇಳುತ್ತಾರೆ.