Connect with us

Latest

ಅಯೋಧ್ಯೆಗೆ ದಾಳಿ ಮಾಡಲು ಐಎಸ್‍ಐ ಸಂಚು – ಗುಪ್ತಚರ ಇಲಾಖೆ

Published

on

ನವದೆಹಲಿ: ಆಗಸ್ಟ್ 15ರಂದು ಉತ್ತರಪ್ರದೇಶದ ಅಯೋಧ್ಯೆ ರಾಮಜನ್ಮಭೂಮಿಗೆ ದಾಳಿ ಮಾಡುವ ಯೋಜನೆಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್) ಹಾಕಿಕೊಂಡಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಧಾರ್ಮಿಕ ಸ್ಥಳಗಳಿಗೆ ದಾಳಿ ಮಾಡಲು ಅಪ್ಘಾನಿಸ್ತಾನದ ಲಷ್ಕರ್-ಇ-ತೈಬಾ(ಎಲ್‍ಇಟಿ) ಹಾಗೂ ಜೈಶ್-ಎ-ಮೊಹಮ್ಮದ್(ಜೆಇಎಂ) ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಅಲ್ಲದೆ ದಾಳಿ ನಡೆಸಲು 3 ರಿಂದ 5 ಗುಂಪುಗಳಾಗಿ ವಿಂಗಡಿಸಿ ಭಯೋತ್ಪಾದಕರನ್ನು ಕಳುಹಿಸಲಾಗುತ್ತಿದೆ ಎಂಬುದಾಗಿ ಇಲಾಖೆ ಮಾಹಿತಿ ನೀಡಿದೆ.

ಗುಪ್ತಚರ ಇಲಾಖೆಯ ಪ್ರಕಾರ, ಇದು ಭಾರತದೊಳಗಿನ ಆಂತರಿಕ ದಾಳಿ ಎಂದು ಕಾಣುವಂತೆ ಮಾಡುವುದು ಭಯೋತ್ಪಾದಕರ ಮೂಲ ಉದ್ದೇಶವಾಗಿದೆ. ವಿವಿಐಪಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡುವ ಪ್ಲಾನ್ ಮಾಡಿಕೊಂಡಿದೆ. ಇದರಿಂದ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

ಈ ಹಿನ್ನೆಲೆಯಲ್ಲಿ ದೆಹಲಿ, ಅಯೋಧ್ಯೆ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕರ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಈ ಸ್ಥಳಗಳಲ್ಲಿ ಜಾಗರೂಕತೆ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಆದೇಶಿಸಿದೆ. ಇದನ್ನೂ ಓದಿ: ಭೂಮಿ ಪೂಜೆಗೆ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ – ಓವೈಸಿ

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದೇ ದಿನ ಕಳೆದ ವರ್ಷ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ತೆಗೆದು ಹಾಕಲಾಗಿತ್ತು.

Click to comment

Leave a Reply

Your email address will not be published. Required fields are marked *