– ವಾಷಿಂಗ್ಟನ್ನಲ್ಲಿ 15 ದಿನ ತುರ್ತು ಪರಿಸ್ಥಿತಿ
– ದಾಂಧಲೆಗೆ ನಾಲ್ವರು ಬಲಿ
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕ ಸಂಸತ್ ಕಟ್ಟಡವಾದ ಅಮೆರಿಕ ಕ್ಯಾಪಿಟಲ್ ಮೇಲೆ ದಾಂಧಲೆ ನಡೆಸಿದ್ದ ವಾಷಿಂಗ್ಟನ್ನಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಾಗಿದೆ.
ಈ ಗಲಭೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಓರ್ವ ಮಹಿಳೆ ಮತ್ತು ಮೂವರು ಪುರುಷರು ಮೃತಪಟ್ಟಿದ್ದಾರೆ. ಕಟ್ಟಡಕ್ಕೆ ನುಗ್ಗದಂತೆ ತಡೆಯಲು ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು. ಆದರೆ ಇದನ್ನುಎಸೆದು ಪ್ರತಿಭಟನಾಕಾರರು ಒಳ ನುಗ್ಗಿದ್ದರು.
Advertisement
So this is how it started. Poor security guys. Scary #USCapitol pic.twitter.com/U0UTFiL5JQ
— Manak Gupta (@manakgupta) January 7, 2021
Advertisement
Advertisement
ಕ್ಯಾಪಿಟಲ್ ಕಟ್ಟಡದಲ್ಲಿ ದಾಂಧಲೆ ನಡೆಸಿದ ಟ್ರಂಪ್ ಬೆಂಬಲಿಗರನ್ನು ಹೊರ ಹಾಕಲು ಅಶ್ರುವಾಯು ಪ್ರಯೋಗಿಸಿದ್ದರು. ಎಲ್ಲದ್ದಕ್ಕೂ ತಯಾರಾಗಿಯೇ ಬಂದಿದ್ದ ರಿಪಬ್ಲಿಕ್ ಬೆಂಬಲಿಗರು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಹಲವರಿಗೆ ಗುಂಡೇಟು ಬಿದ್ದಿದೆ.
Advertisement
Distressed to see news about rioting and violence in Washington DC. Orderly and peaceful transfer of power must continue. The democratic process cannot be allowed to be subverted through unlawful protests.
— Narendra Modi (@narendramodi) January 7, 2021
ವಾಷಿಂಗ್ಟನ್ ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, 52 ಮಂದಿಯನ್ನು ಬಂಧಿಸಲಾಗಿದೆ. ಡೆಮಾಕ್ರಾಟಿಕ್ ನ್ಯಾಷನಲ್ ಕಮಿಟಿ ಮತ್ತು ಮತ್ತು ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಕಚೇರಿ ಬಳಿ ತಲಾ ಒಂದು ಬಾಂಬ್ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Not good enough. Donald Trump needs to tell his supporters to LEAVE the #USCapitol peacefully now. #TrumpViolence #TrumpRally #TrumpMeltdown pic.twitter.com/7vaKqHGE8B
— Jules Morgan ???????? (@glamelegance) January 6, 2021
ಈ ಕೃತ್ಯಕ್ಕೆ ಟ್ರಂಪ್ ಕುಮ್ಮಕ್ಕು ನೀಡಿದ್ದಾರೆ ಮಾಜಿ ಅಧ್ಯಕ್ಷ ಒಬಾಮಾ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರು ಕೃತ್ಯವನ್ನು ಖಂಡಿಸಿದ್ದಾರೆ.
As a result of the unprecedented and ongoing violent situation in Washington, D.C., we have required the removal of three @realDonaldTrump Tweets that were posted earlier today for repeated and severe violations of our Civic Integrity policy. https://t.co/k6OkjNG3bM
— Twitter Safety (@TwitterSafety) January 7, 2021
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಟ್ರಂಪ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ ಟ್ರಂಪ್ ಬೆಂಬಲಿಗರು ಕೃತ್ಯ ಎಸಗಿದ್ದಾರೆ ಎಂದು ಡೆಮಾಕ್ರೆಟಿಕ್ ನಾಯಕರು ದೂರಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ಗಳು ಟ್ರಂಪ್ ಖಾತೆಯನ್ನು ಅಮಾನತಿನಲ್ಲಿಟ್ಟಿವೆ.