ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಜಗದೀಶ್ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇದೀಗ ತಮ್ಮ ಅಭಿಮಾನಿಗಳ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ನೇಹಿತರಾದ ನಿಮಗೆಲ್ಲ ಒಂದು ಸಣ್ಣ ಮನವಿ: ಕಿಚ್ಚ ಸುದೀಪ್
Advertisement
ಸೋಮವಾರ ಅಂದರೆ ನಾಳೆ ನಟಿ ಅಮೂಲ್ಯ ಹುಟ್ಟುಹಬ್ಬ ಇದೆ. ಆದರೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಬರ್ತ್ ಡೇಗೂ ಒಂದು ದಿನ ಮುನ್ನವೇ ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
“ನನ್ನ ಪ್ರೀತಿಯ ಅಭಿಮಾನಿಗಳೇ, ನಿಮ್ಮಲ್ಲೊಂದು ಮನವಿ. ನಿಮಗೆಲ್ಲಾ ತಿಳಿದಿರುವ ಹಾಗೆ ನಾಳೆ ನನ್ನ ಜನ್ಮದಿನ. ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ, ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ, ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ” ಎಂದು ಅಭಿಮಾನಿಗಳ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.
Advertisement
ಅಲ್ಲದೇ ಅಲ್ಲದೇ, “ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು. ನಿಮ್ಮ ಪ್ರೀತಿ, ವಿಶ್ವಾಸ ಸದಾ ಇರಲಿ. ನಿಮ್ಮ ಪ್ರೀತಿಯ ಅಮೂಲ್ಯ ಜಗದೀಶ್” ಎಂದು ಫೇಸ್‍ಬುಕ್, ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.
ನಟಿ ಅಮೂಲ್ಯ ಲಾಕ್‍ಡೌನ್ ಸಂದರ್ಭದಲ್ಲಿ ತಮ್ಮ ಪತಿಯ ಜೊತೆ ಸೇರಿಕೊಂಡು ಬಡವರಿಗೆ, ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಸದ್ಯಕ್ಕೆ ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ನಟಿ ಅಮೂಲ್ಯ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಖಂಡಿತ ಮತ್ತೆ ತೆರೆ ಮೇಲೆ ಅಭಿನಯಿಸುವುದಾಗಿ ಹೇಳಿದ್ದಾರೆ.
ನನ್ನ ಪ್ರೀತಿಯ ಅಭಿಮಾನಿಗಳೇ,
ನಿಮಗೆಲ್ಲಾ ತಿಳಿದಿರುವ ಹಾಗೆ ನಾಳೆ ನನ್ನ ಜನ್ಮದಿನ. ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರ.
ನಿಮ್ಮ ಪ್ರೀತಿ,ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ.
ಆದರೆ ಈ ಬಾರಿ ನಾನು ಮನೆಯಲ್ಲಿ ಇರುವುದಿಲ್ಲ.ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಹಾರೈಸಿ .
ನಿಮ್ಮ
ಅಮೂಲ್ಯ ಜಗದೀಶ್ pic.twitter.com/X6zXU2jNF0
— Amulya (@nimmaamulya) September 13, 2020
ಕೊರೊನಾದಿಂದ ಅಮೂಲ್ಯ ಮಾತ್ರವಲ್ಲದೇ ಅನೇಕ ನಟ, ನಟಿಯರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಇತ್ತೀಚೆಗೆ ನಟ ಸುದೀಪ್ ಕೂಡ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೋಗಿದ್ದರು. ಅವರು ಕೂಡ ಅಭಿಮಾನಿಗಳಿಗೆ ಮನೆಯ ಬಳಿ ಬರಬಾರದೆಂದು ಮನವಿ ಮಾಡಿಕೊಂಡಿದ್ದರು.