– ಪುಂಡಾಟಕ್ಕೆ ಕಠಿಣ ಶಿಕ್ಷೆಯಾಗಲಿ
ಉಡುಪಿ: ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಹಿಂಸಾಚಾರವನ್ನು ಮುಜರಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಖಂಡಿಸಿದ್ದಾರೆ.
ಬೆಂಗಳೂರಿನ ಪುಲಕೇಶಿ ನಗರದ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದು, ಪೊಲೀಸ್ ಠಾಣೆಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದು, ಪೊಲೀಸರ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಗೂಂಡಾಗಿರಿಯ ಮೂಲಕ ಕಾನೂನು ಕೈಗೆತ್ತಿಕೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾನ್ಯ @BSYBJPಯವರು ಆದೇಶ ನೀಡಿದ್ದು, ಸ್ವಾಗತಾರ್ಹ.
— Kota Shrinivas Poojari (@KotasBJP) August 12, 2020
Advertisement
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತಮಾಡಿದ ಅವರು, ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಅಕ್ಷರಕ್ಷರ ಅಪರಾಧ. ಸಾರ್ವಜನಿಕ ಆಸ್ತಿ ನಷ್ಟಕ್ಕೆ ಕಠಿಣ ಶಿಕ್ಷೆ ಆಗಬೇಕಿದೆ. ಪೊಲೀಸ್ ಠಾಣೆಯ ಪೀಠೋಪಕರಣ ಧ್ವಂಸ ಮಾಡಿದ್ದು ಶಿಕ್ಷಾರ್ಹ ಅಪರಾಧ ಎಂದರು.
Advertisement
#WATCH Karnataka: A group of Muslim youth gathered and formed a human chain around a temple in DJ Halli police station limits of Bengaluru city late last night, to protect it from arsonists after violence erupted in the area. (Video source: DJ Halli local) pic.twitter.com/dKIhMjQh96
— ANI (@ANI) August 12, 2020
Advertisement
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸಿದ್ದಾರೆ. ಸಿಎಂ ಅವರ ಆದೇಶವನ್ನು ಸ್ವಾಗತ ಮಾಡುತ್ತೇನೆ ಎಂದು ಕೋಟ ಹೇಳಿದರು.
Advertisement
The incident that took place last night is very unfortunate. A lot of damage has been caused to public property. I appeal to all the people of the city not to be provoked or disturbed by this incident: GN Shivamurthy, Deputy Commissioner, Bengaluru Urban. #Karnataka pic.twitter.com/iExNWgda3p
— ANI (@ANI) August 12, 2020
ಅಭಿಪ್ರಾಯ ಭೇದ ಇದ್ದರೆ ಮುಕ್ತವಾಗಿ ಚರ್ಚೆಗೆ ಅವಕಾಶ ಇದೆ. ಪುಂಡಾಟಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪುಂಡಾಟಿಕೆ ರಾಜ್ಯದಲ್ಲಿ ನಡೆಯಬಾರದು. ಸಿಎಂ ಗೃಹ ಸಚಿವರ ಕ್ರಮವನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಪೂಜಾರಿ ಹೇಳಿದರು.