ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ರಾಮನಾಳ ಗ್ರಾಮದಲ್ಲಿ ಕಂಡು ಬಂದ ಪ್ರಕೃತಿಯ ಅಪರೂಪದ ದೃಶ್ಯಕ್ಕೆ ಇಡೀ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.
ಒಂದೆಡೆ ವಿಚಿತ್ರ ಸುಂಟರಗಾಳಿ ಇನ್ನೊಂದೆಡೆ ಆಕಾಶದಲ್ಲಿ ಸುರಳಿಯಾಕಾರದಲ್ಲಿ ಭೂಮಿಗೆ ಇಳಿಯಲು ಸಜ್ಜಾದ ಮೋಡದ ದೃಶ್ಯ ಬೆರಗು ಮೂಡಿಸಿದೆ. ಪ್ರಕೃತಿಯ ವೈಶಿಷ್ಟ್ಯಕ್ಕೆ ಬೆರಗಾದ ಗ್ರಾಮಸ್ಥರು ವಿಚಿತ್ರ ಸುಳಿ ಗಾಳಿ ಕಂಡು ಗಾಬರಿಗೊಂಡಿದ್ದಾರೆ.
Advertisement
Advertisement
ಜಮೀನೊಂದರಲ್ಲಿ ಕಂಡು ಬಂದ ಸುಂಟರಗಾಳಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಗ್ರಾಮೀಣ ಭಾಗದಲ್ಲಿ ಸುಳಿಗಾಳಿಗೆ ದೆವ್ವದ ಗಾಳಿ ಅಂತಲೇ ಕರೆಯುತ್ತಾರೆ. ಇನ್ನೂ ಆಗಸದಲ್ಲಿ ಸುರಳಿ ಆಕಾರದಲ್ಲಿ ಕಂಡು ಬಂದ ಮೋಡ ಅಚ್ಚರಿಯನ್ನ ಮೂಡಿಸಿತು.
Advertisement
Advertisement
ಗ್ರಾಮಸ್ಥರು ಈ ಅಪರೂಪದ ದೃಶ್ಯಗಳನ್ನ ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.