ಬಳ್ಳಾರಿ: ಲಾಕ್ಡೌನ್ ಹಿನ್ನೆಲೆ ಜನದಟ್ಟಣೆ ಇಲ್ಲದ ಕಾರಣ ಅಪರೂಪದ ಬಿಳಿ ನಾಗರ ಹಾವು ಒಂದು ಜನ ನಿಬಿಡ ಪ್ರದೇಶದಲ್ಲಿ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದಿದೆ.
Advertisement
ಹೊಸಪೇಟೆಯ ಆರ್ಟಿಓ ಕಚೇರಿಯ ಮುಂಭಾಗದಲ್ಲಿ ಇರುವ ರಸ್ತೆಯಲ್ಲಿ ಬಂದ ಬಿಳಿ ನಾಗರ ಹಾವು ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಕೆಲವರೂ ಬಿಳಿ ನಾಗರ ಹಾವು ಕಂಡು ಭಯದಿಂದ ದೂರ ಓಡಿ ಹೋದರೆ, ಇನ್ನೂ ಕೆಲವರು, ಹಾವು ಕಂಡು ಭಕ್ತಿಯಿಂದ ಕೈ ಮುಗಿದರು. ಇದನ್ನೂ ಓದಿ:ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು
Advertisement
Advertisement
ಆದರೆ ಕೆಲ ಸ್ಥಳೀಯರು ನಗರದ ಉರಗ ತಜ್ಞ ಸ್ನೇಕ್ ಅಸ್ಲಂಗೆ ಕರೆ ಮಾಡಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಅಸ್ಲಂ ಅವರು ಜನರಲ್ಲಿ ಹಾವುಗಳನ್ನು ಕೊಲ್ಲದಂತೆ ಮನವಿ ಮಾಡಿ, ಅಪರೂಪದ ಬಿಳಿ ನಾಗರ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟಿದ್ದಾರೆ. ಸ್ನೇಕ್ ಅಸ್ಲಂ ಅವರು ಕೇವಲ ಒಂದೇ ವಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇದನ್ನೂ ಓದಿ: ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ
Advertisement