ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರುವವರ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ. ಇಂದು ಕೂಡ ಆರಂಭಿಕವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿ ಅಭಯ ನೀಡಿದ್ದಾರೆ.
Advertisement
PM observed that timely decisions taken to combat the pandemic have been effective in containing #COVID19 spread in the country. When we look back, people will remember that we have presented an example for cooperative federalism to the world, he said: PM's Office https://t.co/zWbuljAoSf
— ANI (@ANI) June 16, 2020
Advertisement
ದೇಶದಲ್ಲಿ ಸೋಂಕು ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಗುಣಮುಖರಾದವರ ಸಂಖ್ಯೆ ಏರಿದೆ. ಇದರಿಂದ ಜನರು ಭಯಪಡುವ ಅವಶ್ಯಕತೆ ಇಲ್ಲ. ಆದರೆ ಮೃತರ ಸಂಖ್ಯೆ ನೋಡಿದಾಗ ಆತಂಕವಾಗುತ್ತದೆ. ಆದ್ಯಾಗೂ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಕಡಿಮೆ ಎಂದರು.
Advertisement
ದೇಶದಲ್ಲಿ ಅನ್ಲಾಕ್ ಆಗಿದ್ದು ಎಲ್ಲ ಚಟುವಟಿಕೆಗಳು ಆರಂಭವಾಗಿವೆ. ಮನೆಯಿಂದ ಜನರು ಹೊರ ಬರುತ್ತಿದ್ದಾರೆ. ಅಂಗಡಿ ಮುಂಗಟ್ಟು ತೆರೆದಿದ್ದು, ಆರ್ಥಿಕ ವ್ಯವಸ್ಥೆ ಮುಕ್ತವಾಗಿದೆ. ಈ ಸಂದರ್ಭದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಮನೆಯಿಂದು ಹೊರ ಬರುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
Advertisement
Union Home Minister Amit Shah and Union Health Minister Dr Harsh Vardhan also took part in the interaction held today between Prime Minister Narendra Modi and Chief Ministers of states and union territories, via video conference. #COVID19 pic.twitter.com/yAfXHl52WI
— ANI (@ANI) June 16, 2020
ಒಬ್ಬರ ಮಧ್ಯೆ ಮತ್ತೊಬ್ಬರು ಆರು ಅಡಿ ಅಂತರ ಕಾಯ್ದುಕೊಳ್ಳಿ, ಆಗ್ಗಾಗೆ ಕೈಗೆ ಸ್ಯಾನಿಟೈಜರ್ ಹಾಕಿಕೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ಇದು ನಿಮ್ಮನ್ನು ಮಾತ್ರವಲ್ಲದೆ ಮನೆಯಲ್ಲಿರುವ ನಿಮ್ಮವರನ್ನು ಕೊರೊನಾದಿಂದ ದೂರ ಮಾಡಲಿದೆ ಎಂದು ಸಲಹೆ ನೀಡಿದರು.
Interacting with Chief Ministers on Covid-19. https://t.co/BBPkxL466O
— Narendra Modi (@narendramodi) June 16, 2020
ಅನ್ಲಾಕ್ ಬಳಿಕ ದೇಶದ ಆರ್ಥಿಕತೆ ಸುಧಾರಿಸುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಮೇ ತಿಂಗಳಿನಲ್ಲಿ ಅತಿ ಹೆಚ್ಚು ರಸಗೊಬ್ಬರ ಮಾರಾಟವಾಗಿದೆ. ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚಾಗಿದೆ. ಡಿಜಿಟಲ್ ವ್ಯವಹಾರಗಳು ಅಭಿವೃದ್ಧಿ ಕಾಣುತ್ತಿದೆ. ಅಲ್ಲದೇ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸರ್ಕಾರದ ವಿಶೇಷ ಪ್ಯಾಕೇಜ್ ಗಳಿಂದ ಚೇತರಿಕೆ ಕಾಣುತ್ತಿದ್ದು ಈ ಬೆಳವಣಿಗೆ ಮುಂದೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.