ಬೆಂಗಳೂರು: ಕೋರ್ಟ್ನ ಅನುಮತಿ ಸಿಕ್ಕರೆ ಇವತ್ತೇ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಂತ್ರಸ್ತೆಯನ್ನ ಹಾಜರುಪಡಿಸುತ್ತೇವೆ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.
ಸಿಡಿ ಪ್ರಕರಣದ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲರು, ಯುವತಿಯ ರಕ್ಷಣೆ ಮುಖ್ಯವಾಗಿದೆ. ಸಂತ್ರಸ್ತೆ ಯುವತಿ ಇವತ್ತೇ ಕೋರ್ಟ್ಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಈ ಪ್ರಕರಣಕ್ಕೆ ನ್ಯಾಯವನ್ನು ತಂದು ಕೊಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.
Advertisement
Advertisement
ಸಂತ್ರಸ್ತೆ ಯುವತಿ ನ್ಯಾಯ ಮೂರ್ತಿಗಳಿಗೆ ನನಗೆ ರಕ್ಷಣೆ ಕೊಡಿ ಎಂದು ತನ್ನ ಮೇಲ್ನಿಂದ ಪತ್ರವನ್ನು ಪತ್ರವನ್ನು ಕಳುಹಿಸಿದ್ದಾರೆ. ನ್ಯಾಯಮೂರ್ತಿಗಳ ಮುಂದೆ ಯುವತಿ ಹೇಳಿಕೆ ಕೊಡಲು ಸಿದ್ಧರಾಗಿದ್ದು, ಯುವತಿಗೆ ರಕ್ಷಣೆಯನ್ನು ನೀಡಬೇಕಾಗಿದೆ. ಇಂದು ಕೋರ್ಟ್ ಅನುಮತಿ ಪಡೆದು ಯುವತಿಯನ್ನು ಹಾಜರು ಪಡಿಸುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ಆರೋಪಿಯನ್ನು ಎಸ್ಐಟಿ ಅವರು ಬಂಧಿಸಿದರೆ ಈ ಪ್ರಕರಣದ ಕುರಿತಾಗಿ ಸರಿಯಾದ ತನಿಖೆ ನಡೆಯುತ್ತದೆ. ಕೋರ್ಟ್ನ ವಾತಾವರಣವನ್ನು ನೋಡಿಕೊಂಡು ಯುವತಿ ಕೋರ್ಟ್ಗೆ ಬರುತ್ತಾರೆ. ಯುವತಿ ರಕ್ಷಣೆ ಹೇಗೆ ಮುಖ್ಯವೋ ಹಾಗೇ ಯುವತಿಯ ಹೇಳಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಕಡೆಯಿಂದ ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.
ನ್ಯಾಯಾಲಯ ಹೇಗೆ ಹೇಳುತ್ತದೆ ಮತ್ತು ಯಾವ ಸಮಯವನ್ನು ಸೂಚಿಸುತ್ತದೆ ಎಂದು ನೋಡಿ ಸಂತ್ರಸ್ತೆ ಯುವತಿ ಕೋರ್ಟ್ ಮುಂದೆ ಬರುತ್ತಾರೆ. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣವನ್ನು ಬೇರೆ ರಾಜ್ಯದಲ್ಲಿ ಕೇಸ್ ನಡೆಸಲು ಸಾಧ್ಯವಾಗುತ್ತಾ ಎಂದು ನಮ್ಮ ತಂಡ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.