– ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಹಣ
ದಿಸ್ಪುರ್: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಣೆ ಮಾಡಿದ್ದಾರೆ.
ಅಸ್ಸಾಂನಲ್ಲಿ ಭರ್ಜರಿಯಾಗಿ ಚುನಾವಣೆ ಪ್ರಚಾರ ಆರಂಭಿಸಿರುವ ಪ್ರಿಯಾಂಕಾ ಗಾಂಧಿ, ಟೀ ಎಸ್ಟೇಟ್ಗಳಿಗೂ ಭೇಟಿ ನೀಡಿ ಅಲ್ಲಿನ ಕಾರ್ಮಿಕರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ತೇಜಪುರ್ದಲ್ಲಿ ಮಾತನಾಡಿ, ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಗೃಹಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಅಲ್ಲದೆ ಟೀ ಗಾರ್ಡನ್ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ದಿನ 365 ರೂ. ನೀಡುತ್ತೇವೆ. ಅಲ್ಲದೆ 5 ಲಕ್ಷ ಹೊಸ ಸರ್ಕಾರಿ ಕೆಲಸಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ.
Advertisement
We will provide Rs 2,000 per month to all the housewives as ‘grihini samman’. The woman working in tea gardens will be provided Rs 365 per day. We’ll create 5 lakhs new govt jobs. These are not promises but guarantee: Congress General Secretary Priyanka Gandhi in Tezpur, Assam pic.twitter.com/mZ9vdvG7aw
— ANI (@ANI) March 2, 2021
Advertisement
ಈ ಎಲ್ಲ ಹೇಳಿಕೆಗಳು ಕೇವಲ ಆಶ್ವಾಸನೆಗಳಲ್ಲ, ಭರವಸೆಗಳು. ಅಲ್ಲದೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಲ್ಲಿ ಸಿಎಎಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಜನರನ್ನು ಮನವೊಲಿಸಲು ಮುಂದಾಗಿದ್ದಾರೆ.
Advertisement
ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಇಂದು ಬೆಳಗ್ಗೆ ಸಹ ಪ್ರಿಯಾಂಕಾ ಗಾಂಧಿ ವಾದ್ರಾ ಟೀ ಎಲೆಗಳನ್ನು ಕಿತ್ತಿದ್ದಾರೆ. ಈ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
Advertisement
When our party comes into power, a law will be enacted to ensure that CAA is not implemented here. 200 units of electricity will be given free of cost every month: Congress General Secretary Priyanka Gandhi at a rally in Tezpur, Assam pic.twitter.com/hHUQA9Qfs6
— ANI (@ANI) March 2, 2021
ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕಾ ವಾದ್ರಾ ಪ್ರಚಾರದ ಅಂಗವಾಗಿ ಆದಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಟೀ ಎಲೆಗಳನ್ನು ಕೊಯ್ದಿದಿದ್ದಾರೆ. ಚಹಾ ತೋಟ ಕಾರ್ಮಿಕರ ಜೀವನವು ಸತ್ಯ ಮತ್ತು ಸರಳತೆಯಿಂದ ಕೂಡಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರೊಂದಿಗೆ ಕುಳಿತುಕೊಳ್ಳುವುದು ಅವರ ಕೆಲಸ, ಕುಟುಂಬದ ಯೋಗಕ್ಷೇಮ ಮತ್ತು ಅವರ ಜೀವನದ ಕಷ್ಟಗಳನ್ನು ಅನುಭವ ತಿಳಿದುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿ ಮತ್ತು ಈ ಅನ್ಯೋನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಬರೆದುಕೊಂಡು ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.
ತೋಟದಲ್ಲಿ ಮಹಿಳಾ ಕಾರ್ಮಿಕರಿಂದ ಚಹಾ ಎಲೆಗಳನ್ನು ಬಿಡಿಸಿದ್ದಾರೆ ಎಂದು ಬರೆದುಕೊಂಡು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರೀಯಾಂಕಾ ಅವರು ಎಲೆ ಕೀಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
चाय बागान के श्रमिकों का जीवन सच्चाई एवं सादगी से भरा हुआ है एवं उनका श्रम देश के लिए बहुमूल्य है।
आज उनके संग बैठकर उनके कामकाज, घर परिवार का हालचाल जाना और उनके जीवन की कठिनाइयों को महसूस किया।
उनसे मिला प्रेम और ये आत्मीयता नहीं भूलूँगी pic.twitter.com/i99byrBtXn
— Priyanka Gandhi Vadra (@priyankagandhi) March 2, 2021
ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಲಿದ್ದು, ಪ್ರಿಯಾಂಕ ಗಾಂಧಿ 2 ದಿನಗಳ ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ವಿಧಾನಸಭಾ ಚುನಾವಣೆ ಮೂರು ಹಂತದಲ್ಲಿ ನಡೆಯಲಿದೆ.
Smt. @priyankagandhi learns the intricacies of tea leaf plucking directly from the women tea workers at Sadhuru tea garden, Assam.#AssamWithPriyankaGandhi pic.twitter.com/605Kuah2UL
— Congress (@INCIndia) March 2, 2021