ನವದೆಹಲಿ: ಈ ಹಿಂದೆ ಕ್ಯಾಲಿಫೋರ್ನಿಯಾದ 10 ವರ್ಷದ ಬಾಲಕಿ ಪೈಜ್ ತನ್ನ ಅಜ್ಜನನ್ನು ಹಗ್ ಮಾಡಲು ಪ್ಲಾಸ್ಟಿಕ್ ಪರದೆ ತಯಾರಿಸಿದ್ದಳು. ಈ ಮೂಲಕ ಸಾಮಾಜಿಕ ಅಂತರ ನಿಯಮ ಪಾಲಿಸಿ ತನ್ನ ಅಜ್ಜನನ್ನು ಬಿಗಿದಪ್ಪಿದ್ದಳು. ಈ ಬಾಲಕಿಯಿಂದ ಸ್ಪೂರ್ತಿ ಹೊಂದಿ ಇಂಗ್ಲೆಂಡ್ನ ವ್ಯಕ್ತಿಯೊಬ್ಬರು ಅದೇ ರೀತಿಯ ಪರದೆ ತಯಾರಿಸಿ ತನ್ನ ಅಜ್ಜಿಯನ್ನು ತಬ್ಬಿಕೊಂಡು ಸಂತಸ ಪಟ್ಟಿದ್ದಾರೆ. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Advertisement
ಆಂಟೋನಿ ಕವಿನ್ ಈ ಪ್ಲಾಸ್ಟಿಕ್ ಹಾಳೆಯ ಕರ್ಟನ್ನ್ನು ತಮ್ಮ ಅಜ್ಜ, ಅಜ್ಜಿ ಇರುವ ಮನೆಯಲ್ಲಿ ಅಳವಡಿಸಿದ್ದು, ಈ ಸೆಟಪ್ ನೋಡಿ ಆಂಟೋನಿ ಅಜ್ಜಿ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ಆಟೋನಿಯವರನ್ನು ಬಿಗಿದಪ್ಪಿದ್ದಾರೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಮಿರಿಯಮ್ ಕಾವಿನ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 5.4 ಮಿಲಿಯನ್ ವೀವ್ಸ್ ಪಡೆದಿದೆ. 78 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ ಎರಡುಲಕ್ಷದಷ್ಟು ಜನ ಶೇರ್ ಮಾಡಿದ್ದಾರೆ.
Advertisement
It didn’t take a Nobel prize winner to create this device. But to the elderly, who have been missing the embrace of their families, this invention will rank as a life-changing one… As important as the vaccine we’re all waiting for… pic.twitter.com/V6V0TxnGY9
— anand mahindra (@anandmahindra) May 19, 2020
Advertisement
ಉದ್ಯಮಿ ಆನಂದ್ ಮಹೀಂದ್ರಾ ಸಹ ಈ ವಿಡಿಯೋ ಟ್ವೀಟ್ ಮಾಡಿದ್ದು, ಈ ಡಿವೈಸ್ ತಯಾರಿಸಲು ನೋಬೆಲ್ ಪುರಸ್ಕೃತರೇ ಆಗಬೇಕಿಲ್ಲ. ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿರುವವರೇ ಸಾಕು. ಈ ಆವಿಷ್ಕಾರವೂ ಜೀವನವನ್ನು ಬದಲಾಯಿಸುವಂಥದ್ದಾಗಿದೆ. ನಾವೆಲ್ಲರೂ ಕಾಯುತ್ತಿರುವ ಕೊರೊನಾ ಲಸಿಕೆಯಷ್ಟೇ ಮುಖ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.