ಅಂಬುಲೆನ್ಸ್ ಸಿಗದೇ ನೈಸ್ ರಸ್ತೆಯಲ್ಲೇ ಒದ್ದಾಡಿದ ಗಾಯಾಳುಗಳು!

Public TV
1 Min Read
NICE Road 1

ಬೆಂಗಳೂರು: ರಾಜ್ಯದಲ್ಲಿ ಅಂಬುಲೆನ್ಸ್ ಗಳ ಕೊರತೆ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಆದರೆ ಕೊರೊನಾ ರೋಗಿಗಳ ಶಿಫ್ಟ್‍ಗೆ ಅಂಬುಲೆನ್ಸ್ ಬರದೇ ಒದ್ದಾಡಿದ್ದನ್ನು ನೋಡಿದ್ರಿ. ಇದೀಗ ಅಪಘಾತವಾಗಿ ರೋಗಿಗಳಿಗೂ ಅಂಬುಲೆನ್ಸ್ ಸಿಗುತ್ತಿಲ್ಲ.

Ambulance 1 768x422 copy

ಹೌದು. ನಿನ್ನೆ ನೈಸ್ ರಸ್ತೆಯಲ್ಲಿ ಬೈಕ್ ಸೆಲ್ಫ್ ಆಕ್ಸಿಡೆಂಟ್ ಆಗಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಮೂವರು ಯುವಕರಿಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ನೈಸ್ ಸಿಬ್ಬಂದಿ 108 ಗೆ ಕರೆ ಮಾಡಿದ್ದಾರೆ. ಆದರೆ ಕರೆ ಮಾಡಿ ಒಂದು ಗಂಟೆ ಕಳೆದ್ರೂ ಅಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಸ್ವಲ್ಪ ಹಣ ಕೊಟ್ಟು ಸಿಬ್ಬಂದಿ ಖಾಸಗಿ ಅಂಬುಲೆನ್ಸ್ ನಲ್ಲಿ ಕಳಿಸಿದ್ದಾರೆ.

nice road e1572689641213

ಸದ್ಯ ಗಂಭೀರವಾಗಿ ಗಾಯಗೊಂಡ ಸತೀಸ್, ವಿನಯ್, ಕುಶಾಲ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೈಸ್ ಸಿಬ್ಬಂದಿ ಮೊದಲು ಆರ್.ಆರ್ ಆಸ್ಪತ್ರೆಗೆ ಸೇರಿಸಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯಲು 108ಗೆ ಕರೆ ಮಾಡಿದರೂ ಸ್ಥಳಕ್ಕೆ ಬಾರದೆ ಸಿಬ್ಬಂದಿ ಬೇರೆ ಬೇರೆ ದಾರಿ ಕಾಣದೆ ಆರ್.ಆರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

Share This Article